ದಿನ ಭವಿಷ್ಯ | ಇತರರ ತಪ್ಪಿನ ಹೊಣೆಗಾರಿಕೆ ನಿಮ್ಮ ಮೇಲೆ ಬೀಳಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಇತರರ ತಪ್ಪಿನ ಹೊಣೆಗಾರಿಕೆ ನಿಮ್ಮ ಮೇಲೆ ಬೀಳಬಹುದು.  ಬೇರೆಯವರ ತಪ್ಪಿಗೆ ನೀವು ಟೀಕೆ ಎದುರಿಸುವಿರಿ. ಆರ್ಥಿಕ  ಒತ್ತಡ.

ವೃಷಭ
ನೀವಿಂದು ಅಸಹನೆ ಯಿಂದ ವರ್ತಿಸುವಿರಿ. ನಿಮ್ಮ ವರ್ತನೆಯು ಅದೃಷ್ಟವನ್ನು ದೂರ ಮಾಡಬಹುದು. ಆಪ್ತರು ದೂರ ಸರಿದಾರು.

ಮಿಥುನ
ಮಕ್ಕಳ ಸಂಗದಲ್ಲಿ ಸಂತೋಷ. ವೃತ್ತಿಯ ಒತ್ತಡ ಮರೆತು, ಕುಟುಂಬಸ್ಥರ ಸಂಗದಲ್ಲಿ ಹೆಚ್ಚು ಕಾಲ ಕಳೆಯುವ ಅವಕಾಶ. ಸಂತೋಷದ ಕಾಲಕ್ಷೇಪ.

ಕಟಕ
ಹೆಚ್ಚಿದ ಜವಾಬ್ದಾರಿ, ಒತ್ತಡ. ಕೆಲಸ ಜಾಸ್ತಿ. ಇದು ಇಂದಿನ ದಿನಚರಿ. ಹಾಗಾಗಿ ಸಂತೋಷಕ್ಕೆ, ನಿರಾಳತೆಗೆ ಅವಕಾಶ ವಿಲ್ಲ. ಖರ್ಚೂ ಹೆಚ್ಚಬಹುದು.

ಸಿಂಹ
ಆಕ್ರಮಣಶೀಲರಾಗಿ ವರ್ತಿಸುವಿರಿ. ಆದರೆ ಅನವಶ್ಯ ವಿಚಾರದಲ್ಲಿ ಜಗಳ ಕಾಯದಿರಿ. ಸಿಡುಕಿನಿಂದ ಕೆಡುಕು. ಸಹನೆಯನ್ನು ಕಾಯ್ದುಕೊಳ್ಳಿ.

ಕನ್ಯಾ
ಹಣಕಾಸು ವಿಚಾರಗಳಲ್ಲಿ ಇಂದು ಎಚ್ಚರ ವಹಿಸಿ. ಆರ್ಥಿಕವಾಗಿ ಹಿನ್ನಡೆ ಉಂಟಾಗುವ ಸಾಧ್ಯತೆಗಳಿವೆ. ಕೌಟುಂಬಿಕ ನೆಮ್ಮದಿ.

ತುಲಾ
ಅವ್ಯಕ್ತ ಆತಂಕವೊಂದು ದಿನವಿಡೀ ಕಾಡ ಬಹುದು. ಅದನ್ನು ನಿಭಾಯಿಸಲು ನಿಮ್ಮಿಂದಾಗದು. ಬೇರೆ ವಿಚಾರಗಳಲ್ಲಿ ಮನಸ್ಸು ತೊಡಗಿಸಿಕೊಳ್ಳಿ.

ವೃಶ್ಚಿಕ
ಕೌಟುಂಬಿಕ ಜವಾಬ್ದಾರಿ ಹೆಚ್ಚುತ್ತದೆ. ಮಹತ್ವದ ಕಾರ್ಯವೊಂದನ್ನು ಇಂದು ಪೂರೈಸ ಬೇಕಾ
ಗುವುದುಇತರರ ಸಹಕಾರ ನಿರೀಕ್ಷಿಸು ವುದು ವ್ಯರ್ಥ.

ಧನು
ಕೆಲಸದಲ್ಲಿ ನಿಮ್ಮ  ಏಕಾಗ್ರತೆ ಕೆಡಿಸುವಂತಹ ವಿದ್ಯಮಾನ ಸಂಭವಿಸಬಹುದು. ಆದರೆ ವಿಚಲಿತರಾಗದೆ ಕಾರ್ಯ ನಿರ್ವಹಿಸು ವುದು ಒಳಿತು.

ಮಕರ
ಹಳೆ ನೆನಪು ಕಾಡುವಂತಹ ವ್ಯಕ್ತಿಗಳ ಭೇಟಿ. ಪ್ರೀತಿಪಾತ್ರರು ನಿಮ್ಮ ದಿನವನ್ನು ಆನಂದಗೊಳಿಸುತ್ತಾರೆ. ವೃತ್ತಿಯಲ್ಲಿ ಹೆಚ್ಚು ಏರುಪೇರಿರದು.

ಕುಂಭ
ನೀವಿಂದು ಭಾವುಕರಾಗಿ ವರ್ತಿಸುವಿರಿ. ನಿಮ್ಮ ನೈಜ ಭಾವನೆಯನ್ನು ವ್ಯಕ್ತಪಡಿಸಲು ಅಹಂ ಅಡ್ಡ ಬರುತ್ತದೆ. ಆಪ್ತರೊಂದಿಗೆ ಮುಕ್ತ ಮನಸ್ಸು ಒಳಿತು.

ಮೀನ
ಕೆಲದಿನಗಳ ಕಠಿಣ ಶ್ರಮದ ಬಳಿಕ ಇಂದು ಅದರ ಫಲ ಉಣ್ಣಲು ತಯಾರಾಗಿರಿ. ನೀವು ಕುಶಿ ಪಡುವ ಬೆಳವಣಿಗೆ ಸಂಭವಿಸುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!