ಭಯೋತ್ಪಾದನೆ ಹತ್ತಿಕ್ಕಲು ಅಪ್ಘಾನಿಸ್ತಾನದಲ್ಲಿ ಭಾರತದ ಪ್ರಯತ್ನಗಳು ಮತ್ತು ಜಗತ್ತಿನ ಜವಾಬ್ದಾರಿಗಳ ಕುರಿತು ಅಜಿತ್‌ ದೋವಲ್‌ ಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕ ಶಾಂತಿ ಮತ್ತು ಭದ್ರತೆಗೆ ಅಪಾಯೊಡ್ಡುವ ಭಯೋತ್ಪಾದಕ ಗುಂಪುಗಳ ವಿರುದ್ಧ ಹೋರಾಡಲು ಅಪಘಾನಿಸ್ಥಾನಕ್ಕೆ ಶಕ್ತಿ ತುಂಬುವ ಕೆಲಸವಾಗ ಬೇಕು ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಚೀನಾ ಸೇರಿದಂತೆ ಇತರ ಏಳು ರಾಷ್ಟ್ರಗಳಿಗೆ ಒತ್ತಾಯ ಮಾಡಿದ್ದಾರೆ.

ತಝಕಿಸ್ತಾನದಲ್ಲಿ ನಡೆದ ಭದ್ರತಾ ಸಂವಾದದಲ್ಲಿ ಮಾತನಾಡಿದ ಅಜಿತ್‌ ದೋವಲ್‌ “ಅಪಘಾನಿಸ್ತಾನಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಜೀವಿಸುವ ಹಕ್ಕು, ಗೌರವಯುತವಾದ ಜೀವನ, ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವ ಮೂಲಕ ಜಾಗತಿಕ ಶಾಂತಿ ಕದಡುವ ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಾದ ಅವಶ್ಯಕತೆಯಿದೆ. ಇದನ್ನು ಖಚಿತ ಪಡಿಸಲು ರಚನಾತ್ಮಕ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಭಾರತದ ಪ್ರಯತ್ನಗಳನ್ನು ಒತ್ತಿ ಹೇಳಿದ ಅವರು “ದಶಕಗಳಿಂದ ಭಾರತವು ಅಪಘಾನಿಸ್ತಾನದಲ್ಲಿ ಮೂಲಸೌಕರ್ಯ, ಸಂಪರ್ಕ ಮತ್ತು ಮಾನವೀಯ ನೆರವಿನ ಕುರಿತು ಗಮನ ಹರಿಸುತ್ತಿದೆ. ತಾಲೀಬಾನ್‌ ಸ್ವಾಧೀನದ ನಂತರ ಭಾರತವು ಈಗಾಗಲೇ 17000 ಮೆಟ್ರಿಕ್ ಟನ್ ಗೋಧಿ, 5,00,000 ಡೋಸ್ ಕೋವಾಕ್ಸಿನ್ ಮತ್ತು 13 ಟನ್ ಜೀವ ಅಗತ್ಯ ಉಳಿಸುವ ಔಷಧಿಗಳು, 60 ಮಿಲಿಯನ್ ಡೋಸ್ ಪೋಲಿಯೊ ಲಸಿಕೆ ಮತ್ತು ಚಳಿಗಾಲದ ಉಡುಪುಗಳನ್ನು ಒದಗಿಸಿದೆ. ಈ ಸಂಬಂಧವು ಮುಂದೂ ಕೂಡ ಮುಂದುವರೆಯುತ್ತದೆ. ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದಿದ್ದಾರೆ. ಭಯೋತ್ಪಾದನೆಯ ವಿರುದ್ಧ ಹೋರಾಡಲು ಮಹಿಳೆಯರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಆಫ್ಘನ್ ಸಮಾಜದ ಎಲ್ಲಾ ವರ್ಗಗಳ ಪ್ರಾತಿನಿಧ್ಯದ ಅಗತ್ಯವನ್ನು ಉಲ್ಲೇಖಿಸಿದ್ಧಾರೆ. ಆಮೂಲಕ ಅಪ್ಘನ್‌ ನಾಗರಿಕರಿಗೆ ಶಕ್ತಿ ತುಂಬಿ ಭಯೋತ್ಪಾದನೆಯ ವಿರುದ್ಧ ಹೋರಾಡಲು ಅವರನ್ನು ಸಜ್ಜುಗೊಳಿಸಲು ಎಲ್ಲಾ ರಾಷ್ಟ್ರಗಳೂ ಪ್ರಯತ್ನಿಸಬೇಕು ಎಂದು ಅವರು ಉಳಿದ ರಾಷ್ಟ್ರಗಳನ್ನು ಒತ್ತಾಯಿಸಿದ್ದಾರೆ

ನವೆಂಬರ್ 2021 ರಲ್ಲಿ ನವದೆಹಲಿಯಲ್ಲಿ ಅಫ್ಘಾನಿಸ್ತಾನದ ಕುರಿತು ನಡೆದ 3 ನೇ ಪ್ರಾದೇಶಿಕ ಭದ್ರತಾ ಸಂವಾದದ ನಂತರ ತಜಕಿಸ್ತಾನದ ದುಶಾನ್ಬೆಯಲ್ಲಿ ನಡೆದ ಈ ಪ್ರಾದೇಶಿಕ ಭದ್ರತಾ ಸಂವಾದದಲ್ಲಿ ತಜಕಿಸ್ತಾನ್, ಭಾರತ, ರಷ್ಯಾ, ಕಝಾಕಿಸ್ತಾನ್, ಉಜ್ಬೇಕಿಸ್ತಾನ್, ಇರಾನ್, ಕಿರ್ಗಿಸ್ತಾನ್ ಮತ್ತು ಚೀನಾದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!