ಹೊಸ ದಿಗಂತ ವರದಿ , ಮೈಸೂರು:
ನಗರದಲ್ಲಿ ಅ.13 ರಂದು ನಡೆದ ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಒಕ್ಕಲಿಗರು ಸಂಸ್ಕೃತಿ ಹೀನರೆಂದು ಅವಹೇಳನ ಮಾಡಿರುವ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಮೈಸೂರಿನ ದೇವರಾಜ ಠಾಣೆಯಲ್ಲಿ ಪ್ರೊ.ಭಗವಾನ್ ವಿರುದ್ಧ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ದೂರು ದಾಖಲಿಸಿದೆ. ಕೆ.ಎಸ್. ಭಗವಾನ್ ದುರುದ್ದೇಶಪೂರ್ವಕವಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಜಾತಿ- ಜಾತಿಗಳ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದಾರೆ.
ದೇಶದ್ರೋಹದ ಕೆಲಸವಾದ ದೇಶದ ಸಹಬಾಳ್ವೆ ಮತ್ತು ಒಗ್ಗಟ್ಟನ್ನು ಹೊಡೆಯುವ ಕೆಲಸವನ್ನು ಮಾಡುತ್ತಿರುವುದು ಕಂಡು ಬರುತ್ತದೆ. ಆದ್ದರಿಂದ ಈ ಕೂಡಲೇ ಅವರ ಮೇಲೆ ಮಾನಹಾನಿ ಪ್ರಕರಣ ಹಾಗೂ ದೇಶದ್ರೋಹಿ ಪ್ರಕರಣವನ್ನು ದಾಖಲಿಸಿ, ಕಾನೂನು ರೀತಿಯ ಸೂಕ್ತ ಕ್ರಮ ಕೈಗೊಂಡು ಕೂಡಲೇ ಅವರನ್ನು ಬಂಧಿಸಬೇಕು. ವಿಶ್ವವಿದ್ಯಾನಿಲಯ ನೀಡುವ ಸವಲತ್ತುಗಳನ್ನ ನಿಲ್ಲಿಸಬೇಕು ಎಂದು ಸಂಘ ಆಗ್ರಹಿಸಿದೆ.
ಪೊಲೀಸರಿಗೆ ದೂರು ನೀಡುವ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಜಿಲ್ಲಾ ಗೌರವಾಧ್ಯಕ್ಷ ಡಾ. ಸಿ ವೈ ಶಿವೇಗೌಡ, ಶಿವಲಿಂಗಯ್ಯ, ಜಗದೀಶ್, ಲತ ರಂಗನಾಥ, ಸುಬ್ಬೇಗೌಡ, ಲಕ್ಷಿ÷್ಮ, ರವಿ ಒಲಂಪಿಯ, ಕೃಷ್ಣಯ್ಯ ಸಿ, ಮಂಜುಳ, ಶೋಭಾ, ಸೌಭಾಗ್ಯ, ಅಪೂರ್ವ, ಎಳನೀರು ರಾಮಣ್ಣ, ಹನುಮಂತಯ್ಯ, ಪ್ರದೀಪ್, ದಿಲೀಪ್ ಕುಮಾರ್ ಗೌಡ, ದರ್ಶನ್ ಗೌಡ ಮತ್ತಿತರರು ಹಾಜರಿದ್ದರು.