ಫಾಝೀಲ್ ಹತ್ಯೆಗೆ ಬಳಕೆಯಾಗಿದ್ದ ಕಾರೀಗ ಸುರತ್ಕಲ್ ಪೊಲೀಸರ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಸುರತ್ಕಲ್ ನಲ್ಲಿ ನಡೆದ ಫಾಝೀಲ್ ಹತ್ಯೆಗೆ ಬಳಸಿದ ಕಾರು ಅನ್ನು ಭಾನುವಾರ ಸುರತ್ಕಲ್ ಪೋಲಿಸರ ತಂಡ ವಶಕ್ಕೆ ಪಡೆದಿದ್ದಾರೆ.
ಪಡುಬಿದ್ರೆ ಠಾಣಾ ವ್ಯಾಪ್ತಿಯ ಇನ್ನಾ ಗ್ರಾಮದ ಕಾಂಜರಕಟ್ಟೆಗೆ ಆಗಮಿಸಿದ ಸುರತ್ಕಲ್ ಪೊಲೀಸರು, ಫಾಝೀಲ್ ಹತ್ಯೆಗೆ ಬಳಸಿದ ಬಿಳಿ ಬಣ್ಣದ ಇಯಾನ್ ಕಾರು ಅನ್ನು ಪರಿಶೀಲಿಸಿ, ಮುಂದಿನ ತನಿಖೆಗೆಂದು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವೇಳೆ ಸ್ಥಳದಲ್ಲಿ ಪಡುಬಿದ್ರೆ ಪೊಲೀಸರು ಹಾಜರಿದ್ದರು.
ಇಂದು ಬೆಳಿಗ್ಗೆ ಸ್ಥಳೀಯರು ಉಡುಪಿ ಜಿಲ್ಲಾ ಪೊಲೀಸರಿಗೆ ನೀಡಿದ ಮಾಹಿತಿ ಆಧಾರದಲ್ಲಿ ಕಾರು ಪತ್ತೆಯಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!