ಬಾಲಿವುಡ್‌ ನಿಂದ ಹಾಲಿವುಡ್‌ ಗೆ ಹಾರಿದ್ದಾರಂತೆ ಕ್ಯೂಟ್‌ ನಟಿ ಆಲಿಯಾ ಭಟ್!‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್‌ ನ ಕ್ಯೂಟ್‌ ನಟಿ ಆಲಿಯಾ ಭಟ್‌ ಈಗ ಬಾಲಿವುಡ್‌ ನಿಂದ ಹಾಲಿವುಡ್‌ ಗೆ ಜಂಪ್‌ ಆಗುತ್ತಿದ್ದಾರೆ.
ಗಂಗೂಬಾಯಿ ಕಥಿಯೇವಾಡಿ ಸಿನಿಮಾದ ಯಶಸ್ಸಿನ ನಂತರ ಆಲಿಯಾಗೆ ಬೇಡಿಕೆಗಳು ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಹಾಲಿವುಡ್‌ ನಲ್ಲೂ ತಮ್ಮ ಅದೃಷ್ಟದ ಪರೀಕ್ಷೆ ನಡೆಸಲಿದ್ದಾರೆ.
ಹೌದು. ಆಲಿಯಾ ಹಾಲಿವುಡ್‌ ಎಂಟ್ರಿ ಕೊಡುತ್ತಿರುವುದು ಸತ್ಯ. ಈ ಬಗ್ಗೆ ನೆಟ್ ಫ್ಲಿಕ್ಸ್‌ ಅಧಿಕೃತ ಘೋಷಣೆ ಮಾಡಿದೆ.

ಹಾಲಿವುಡ್‌ ನಲ್ಲಿ ಯಾವ ಸಿನಿಮಾ?: ಆಲಿಯಾ ಭಟ್‌ ಗೆ ಹಾಲಿವುಡ್‌ ನಲ್ಲಿ ಹಾರ್ಟ್‌ ಆಫ್‌ ಸ್ಟೋನ್‌ ಚಿತ್ರಕ್ಕೆ ಅವಕಾಶ ಸಿಕ್ಕಿದ್ದು, ಇದನ್ನು ನೆಟ್‌ ಫ್ಲಿಕ್ಸ್‌ ನಿರ್ಮಾಣ ಮಾಡುತ್ತಿದೆ. ಟಾಮ್‌ ಹಾರ್ಪರ್‌ ನಿರ್ದೇಶಕ್ಕೆ ಇಳಿದಿದ್ದು, ಈ ಚಿತ್ರ ಸ್ಪೈ ಥ್ರಿಲ್ಲರ್‌ ಜಾನರ್‌ ನಲ್ಲಿ ಬರಲಿದೆ. ಈ ಚಿತ್ರದಲ್ಲಿ ಆಲಿಯಾ ಜತೆಗೆ ಗಾಲ್‌ ಗಾಡೋಟ್‌, ಜೇಮಿ ಡೊರ್ನಾನ್‌ ಕೂಡ ಬಣ್ಣ ಹಚ್ಚಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!