ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಆಲಿಯಾ ಭಟ್ ‘ರಾಕಿ ಔರ್ ರಾನಿ ಕಿ ಪ್ರೇಮ್ ಕಹಾನಿ’ ಸಿನಿಮಾ ಪ್ರಮೋಷನ್ಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ತಾಯಿ ಹಾಗೂ ತಂಗಿಯ ಜೊತೆ ಆಲಿಯಾ ಡಿನ್ನರ್‌ಗೆ ತೆರಳಿದ್ದು, ಪ್ಯಾಪರಾಜಿಗಳು ಮುತ್ತಿಕೊಂಡಿದ್ದಾರೆ. ಆಲಿಯಾ ಫೋಟೊ ತೆಗೆಯುವ ಭರದಲ್ಲಿ ಫೋಟೊಗ್ರಾಫರ್ ತನ್ನ ಒಂದು ಚಪ್ಪಲಿಯನ್ನು ಬೀಳಿಸಿಕೊಂಡಿದ್ದಾರೆ.
ಆಲಿಯಾ ನಡೆದು ಕಾರ್‌ಬಳಿ ಹೋಗೋ ದಾರಿಯಲ್ಲಿ ಒಂದು ಚಪ್ಪಲಿ ಮಾತ್ರ ಕಾಣಿಸಿದ್ದು, ಇದು ಯಾರದ್ದು ಎಂದು ಕೇಳಿದ್ದಾರೆ, ಪ್ಯಾಪರಾಜಿಯೊಬ್ಬರು ನನ್ನದು ತೆಗೆದುಕೊಳ್ತೇನೆ ಎಂದಿದ್ದಾರೆ. ಆಲಿಯಾ ಚಪ್ಪಲಿಯನ್ನು ಕೈಯಲ್ಲಿ ಎತ್ತಿ ಅವರ ಕಾಲಿನ ಬಳಿ ಹಾಕಿದ್ದಾರೆ. ಆಲಿಯಾ ನಡೆಗೆ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ನಟಿ ಸರಳತೆಯನ್ನು ಮೆಚ್ಚಿದ್ದಾರೆ. ಆದರೆ ಕೆಲ ವರ್ಗದ ಜನ ಇದೆಲ್ಲಾ ಪ್ರಚಾರಕ್ಕಾಗಿ ಗಿಮಿಕ್ ಎಂದು ಹೇಳಿದ್ದಾರೆ.
https://www.instagram.com/reel/CupNSsnLxxZ/?utm_source=ig_web_copy_link&igshid=MzRlODBiNWFlZA==