Saturday, December 9, 2023

Latest Posts

ಮರಳಿನಲ್ಲಿ ಅರಳಿದ ಕಲೆ: Chandrayaan 3 ಆಕೃತಿ ರಚಿಸಿ ಶುಭಕೋರಿದ ಕಲಾವಿದ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಎಂದೂ ಮರೆಯಲಾಗದ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದು, ಈ ವಿಶೇಷ ಸಂದರ್ಭದಲ್ಲಿ ಕಲಾವಿದನೊಬ್ಬ ಮರಳಿನಲ್ಲಿ Chandrayaan 3 ಆಕೃತಿ ರಚಿಸಿ ಶುಭಕೋರಿದ್ದಾರೆ.

ಚಂದ್ರಯಾನ 3 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಡೆ ಈ ಭಾರಿ ಇಸ್ರೋ ಯಶಸ್ವಿಯಾಗಲಿದೆ ಎಂಬ ಹಾರೈಕೆಗಳು ಕೇಳಿ ಬರುತ್ತಿವೆ. ಈ ಶುಭಸಂದರ್ಭದಲ್ಲಿ ಸುದರ್ಶನ ಪಾಟ್ನಾಯಕ್ ಎಂಬುವವರು ಭಾರತವು #Chandrayan3 ನೊಂದಿಗೆ ಚಂದ್ರನ ಮೇಲಿನ ಕಾರ್ಯಾಚರಣೆಗೆ ಯಶಸ್ವಿಯಾಗಲೆಂದು ಪ್ರಾರ್ಥಿಸುತ್ತೇನೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ಒಡಿಶಾದ ಪುರಿ ಬೀಚ್‌ನಲ್ಲಿ ”ವಿಜಯೀ ಭಾವ” ಎಂಬ ಸಂದೇಶದೊಂದಿಗೆ 500 ಸ್ಟೀಲ್ ಬೌಲ್‌ಗಳನ್ನು ಬಳಸಿ, ಚಂದ್ರಯಾನ, ಚಂದ್ರ, ಬಾಹ್ಯಾಕಾಶ ನೌಕೆಯನ್ನು ಮರಳಿನಲ್ಲಿ ರಚಿಸಿ ಶುಭ ಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!