ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿ ಸೆಲೆಬ್ರಿಟಿಗಳು ಎಲ್ಲಿಗೆ ಹೋದರೂ ಪ್ಯಾಪರಾಝಿಗಳು ಅಲ್ಲಿ ಹಾಜರಾಗಿ ಬಿಡ್ತಾರೆ, ಖಾಸಗಿತನದ ಬಗ್ಗೆಯೂ ಯೋಚಿಸದೆ ಫೋಟೊಸ್ ತೆಗೆದುಬಿಡುತ್ತಾರೆ.
ಇದೇ ಸಮಸ್ಯೆಯನ್ನು ಆಲಿಯಾ ಭಟ್ ಕೂಡ ಎದುರಿಸಿದ್ದು, ತನ್ನದೇ ಮನೆಯಲ್ಲಿಯೂ ಖಾಸಗಿತನ ಇಲ್ಲದಂತಾಗಿದೆ ಎಂದು ಆಲಿಯಾ ಗರಂ ಆಗಿದ್ದಾರೆ.
ಆಲಿಯಾ ಭಟ್ ತಮ್ಮ ಮನೆಯಲ್ಲಿದ್ದರು. ಪಕ್ಕದ ಮನೆಯ ಟೆರೇಸ್ ಏರಿದ ಪ್ಯಾಪರಾಝಿಗಳು ಆಲಿಯಾ ಫೋಟೊ ಕ್ಲಿಕ್ ಮಾಡಿದ್ದಾರೆ. ಯಾರೋ ನನ್ನನ್ನು ನೋಡ್ತಿದ್ದಾರೆ ಅಂತ ಅನಿಸ್ತಾ ಇತ್ತು, ಎದ್ದು ನೋಡಿದ ಪಕ್ಕದ ಮನೆಯ ಟೆರೇಸ್ ಮೇಲಿಂದ ಇಬ್ಬರು ನನ್ನ ಕಡೆ ಕ್ಯಾಮೆರಾ ಆನ್ ಮಾಡಿ ನಿಂತಿದ್ದರು.
ದಿಸ್ ಈಸ್ ನಾಟ್ ಒಕೆ, ಇದು ಸರಿಯಲ್ಲ, ನನ್ನ ಪ್ರೈವೆಸಿ ಹಾಳಾಗಿದೆ, ಲೈನ್ ಕ್ರಾಸ್ ಮಾಡಿದ್ದಾರೆ. ಇದರ ವಿರುದ್ಧ ದೂರು ಸಲ್ಲಿಸುವುದಾಗಿ ಆಲಿಯಾ ಹೇಳಿದ್ದಾರೆ.