Thursday, March 23, 2023

Latest Posts

ಎರಡು ಸಾವಿರ ಉದ್ಯೋಗಿಗಳನ್ನು ಮನೆಗೆ ಕಳಿಸಲಿದೆ ಮೆಕೆನ್ಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಆರ್ಥಿಕ ಕುಸಿತದ ಭೀತಿಯಲ್ಲಿ ಕಾರ್ಪೋರೇಟ್‌ ವಲಯದಲ್ಲಿ ಉದ್ಯೋಗ ಕಡಿತಗಳು ಮುಂದುವರೆದಿದ್ದು ಇದೀಗ ಪ್ರಸಿದ್ಧ ಕನ್ಸಲ್ಟಿಂಗ್‌ ಕಂಪನಿ ಮೆಕೆನ್ಸೆ & ಕಂ. ತನ್ನ 2,000 ಉದ್ಯೋಗಿಗಳನ್ನು ಮನೆಗೆ ಕಳಿಸಲು ಯೋಜಿಸುತ್ತಿದೆ. ಇದು ದೈತ್ಯ ಕಂಪನಿಯ ಅತಿದೊಡ್ಡ ಉದ್ಯೋಗ ಕಡಿತ ಎನ್ನಲಾಗಿದೆ.

ಇಲ್ಲಿಯವರೆಗೂ ತನ್ನ ಗ್ರಾಹರಿಗೆ ಉದ್ಯೋಗಕಡಿತದ ಯೋಜನೆಗಳನ್ನು ರೂಪಿಸಿಕೊಡುತ್ತಿದ್ದ ಕಂಪನಿ ಇದೀಗ ತನ್ನದೇ ಉದ್ಯೋಗಿಗಳನ್ನು ಹೊರಹಾಕಲು ಮುಂದಾಗಿದ್ದು ಪ್ರಾಜೆಕ್ಟ್ ಮ್ಯಾಗ್ನೋಲಿಯಾ ಎಂದು ಕರೆಯಲ್ಪಡುವ ಯೋಜನೆಯಡಿಯಲ್ಲಿ ಉದ್ಯೋಗ ಕಡಿತ ನಡೆಸಲಿದೆ. ಕಳೆದ ದಶಕದಲ್ಲಿ ತನ್ನ ಹೆಡ್‌ಕೌಂಟ್‌ನಲ್ಲಿ ತ್ವರಿತ ಬೆಳವಣಿಗೆಯನ್ನು ಕಂಡಿರುವ ಸಂಸ್ಥೆಯು, ಕೆಲವು ಬೆಂಬಲ ತಂಡಗಳನ್ನು ಪುನರ್ರಚಿಸುತ್ತಿದ್ದು ಅದರ ಭಾಗವಾಗಿ ಉದ್ಯೋಗ ಕಡಿತಗಳು ನಡೆಯಲಿದೆ.

ಮುಂಬರುವ ವಾರಗಳಲ್ಲಿ ಯೋಜನೆಯು ಅಂತಿಮಗೊಳ್ಳುವ ನಿರೀಕ್ಷೆಯಿದೆ ಮತ್ತು ಅದರ 45,000 ಉದ್ಯೋಗಿಗಳಲ್ಲಿ ತೆಗೆದು ಹಾಕಬೇಕಾದ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎನ್ನಲಾಗಿದೆ.

ಸಂಸ್ಥೆಯು 2021 ರಲ್ಲಿ ದಾಖಲೆಯ 15 ಶತಕೋಟಿ ಡಾಲರ್ ಆದಾಯವನ್ನು ಪ್ರಕಟಿಸಿತು ಮತ್ತು 2022 ರಲ್ಲಿ ಆ ಅಂಕಿಅಂಶವನ್ನು ಮೀರಿಸಿದೆ‌ ಎಂದು ಮೂಲಗಳ ವರದಿ ಹೇಳಿದೆ. ಬೇಡಿಕೆಯಲ್ಲಿನ ಮಂದಗತಿ ಮತ್ತು ಹಿಂಜರಿತದ ಮುನ್ಸೂಚನೆಗಳ ಕಾರಣದಿಂದ ಈ ಉದ್ಯೋಗ ಕಡಿತಗಳು ಸಂಭವಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!