Thursday, March 30, 2023

Latest Posts

ಸೊಮಾಲಿಯಾದ ಮೊಗಾದಿಶುನಲ್ಲಿ ಅಲ್​ ಶಬಾಬ್ ಉಗ್ರರಿಂದ ದಾಳಿ : 10 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿರುವ ಮನೆಯೊಂದರ ಮೇಲೆ ಅಲ್-ಶಬಾಬ್ ಉಗ್ರರು ದಾಳಿ ನಡೆಸಿದ್ದು, 10 ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಅಬ್ಡಿಯಾಸಿಜ್‌ನ ಉತ್ತರ ಜಿಲ್ಲೆಯಲ್ಲಿ ಘಟನೆ ಸಂಭವಿಸಿದ್ದು, ಮೂರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ.

“ದಾಳಿಗೀಡಾದ ಮನೆಯಲ್ಲಿ ಹಾಗೂ ಹತ್ತಿರದ ಮನೆಗಳಲ್ಲಿದ್ದ ಹಲವು ನಾಗರಿಕರನ್ನು ಭದ್ರತಾ ಪಡೆಗಳು ರಕ್ಷಣೆ ಮಾಡಿವೆ” ಎಂದು ಸರ್ಕಾರ ತಿಳಿಸಿದೆ.

ಅಲ್-ಖೈದಾ ಜೊತೆ ನಂಟು ಹೊಂದಿರುವ ಅಲ್-ಶಬಾಬ್ ಉಗ್ರ ಸಂಸ್ಥೆಯು ಈ ಈ ದಾಳಿಯನ್ನು ಸಮರ್ಥಿಸಿಕೊಂಡಿದೆ.

ಇತ್ತೀಚೆಗಷ್ಟೇ ಅಮೆರಿಕ ಹಾಗೂ ಆಫ್ರಿಕನ್‌ ಯೂನಿಯನ್‌ನ ಸೇನೆಗಳ ಬೆಂಬಲದಿಂದ ಸೋಮಾಲಿಯಾದ ಭದ್ರತಾ ಪಡೆಗಳು ಅಲ್‌–ಶಬಾಬ್‌ ವಶದಲ್ಲಿದ್ದ ಹಲವು ಸ್ಥಳಗಳನ್ನು ವಶಕ್ಕೆ ಪಡೆದುಕೊಂಡಿದ್ದವು.

ಆದರೆ ಹಲವು ಗ್ರಾಮಾಂತರ ಸ್ಥಳಗಳು ಇನ್ನೂ ಅಲ್-ಶಬಾಬ್ ಉಗ್ರರ ವಶದಲ್ಲಿದ್ದು, ಸೊಮಾಲಿಯಾ ಮತ್ತು ನೆರೆಯ ದೇಶಗಳಲ್ಲಿ ಹಲವಾರು ಪ್ರತೀಕಾರದ ದಾಳಿಗಳನ್ನು ನಡೆಸುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!