ಅಕ್ರಮವಾಗಿ ಕೂಡಿಹಾಕಿದ್ದ 30 ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಿದ ಪೊಲೀಸರು

ಹೊಸದಿಗಂತ ವರದಿ,ಚಿತ್ರದುರ್ಗ:

ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯಿದೆ ಜಾರಿ ಮಾಡಿದ್ದರೂ ಗೋಹತ್ಯೆ ಅವ್ಯಾಗತವಾಗಿ ನಡೆಯುತ್ತಿದೆ. ಇದಕ್ಕೆ ಜಾತಾ ಉದಾಹರಣೆ ಎಂಬಂತೆ ನಗರದ ಜೆ.ಜೆ. ಹಟ್ಟಿಯ ಮನೆಯೊಂದರ ಕಾಂಪೌಂಡ್‌ನಲ್ಲಿ ಅಕ್ರಮವಾಗಿ ಕೋಡಿಹಾಕಿದ್ದ ಸುಮಾರು ೩೦ಕ್ಕೂ ಹೆಚ್ಚು ಜಾನುವಾರುಗಳನ್ನು ಮಂಗಳವಾರ ವಶಪಡಿಸಿಕೊಳ್ಳಲಾಗಿದೆ.
ಸೂಕ್ತ ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸ್ ವರಿಷ್ಟಾಕಾರಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ತಂಡ ಮಂಗಳವಾರ ದಾಳಿ ನಡೆಸಿ ಜಾನುವಾರುಗಳನ್ನು ರಕ್ಷಿಸಿದೆ. ನಂತರ ಅವುಗಳನ್ನು ಕಾತ್ರಾಳ್ ಬಳಿಯ ಆದಿಚುಂಚನಗಿರಿ ಗೋಶಾಲೆಗೆ ರವಾನಿಸಲಾಗಿದೆ.
ಗೌ ಗ್ಯಾನ್ ಪೌಂಡೇಶನ್ ಸಿಬ್ಬಂದಿಗಳು ನೀಡಿದ ಮಾಹಿತಿ ಆಧರಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ನಗರಸಭೆ ಸೇರಿದಂತೆ ಮತ್ತಿತರ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮಂಗಳವಾರ ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿ ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗ ನಗರದ ಜೆ.ಜೆ. ಹಟ್ಟಿ ಬಳಿಯ ಅಂಗನವಾಡಿ ಕೇಂದ್ರದ ಸಮೀಪ ಕಾಂಪೌಂಡ್ ಒಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕೂಡಿಹಾಕಲಾಗಿತ್ತು. ಇಲ್ಲಿ ೩೦ಕ್ಕೂ ಹೆಚ್ಚು ಜಾನುವಾರುಗಳಿದ್ದು, ಅವುಗಳನ್ನು ವಶಪಡಿಸಿಕೊಂಡು ಗೋ ಶಾಲೆಗೆ ನೀಡಲಾಗಿದೆ.
ಹೋರಿ, ಹಸು, ಕರು, ಎಮ್ಮೆ ಸೇರಿದಂತೆ ಸುಮಾರು ೩೦ಕ್ಕೂ ಹೆಚ್ಚು ಜಾನುವಾರುಗಳನ್ನು ಚಿತ್ರದುರ್ಗ ನಗರದ ಜೆ.ಜೆ. ಹಟ್ಟಿಯ ಮನೆಯೊಂದರ ಕಾಂಪೌಂಡ್‌ನಲ್ಲಿ ಅಕ್ರಮವಾಗಿ ಕೂಡಿಹಾಕಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಗೌ ಗ್ಯಾನ್ ಪೌಂಡೇಶನ್ ಸಿಬ್ಬಂದಿಗಳು, ಪ್ರಾಣಿ ದಯಾ ಸಂಘ ಹಾಗೂ ಚಿತ್ರದುರ್ಗ ನಗರ ಠಾಣೆಗೆ ಮಾಹಿತಿ ರವಾನಿಸಿದ ಬಳಿಕ ಪೊಲೀಸರೊಂದಿಗೆ ದಾಳಿ ನಡೆಸಿದ್ದಾರೆ.
ಅಲ್ಲದೇ ಸಮೀಪದಲ್ಲೇ ಇದ್ದ ಮಾಂಸದ ಅಂಗಡಿಗಳ ಮೇಲೂ ದಾಳಿ ಮಾಡಿದ್ದು ಮಾಸದ ಅಂಗಡಿಗಳಲ್ಲಿ ಗೋವುಗಳನ್ನು ಕತ್ತರಿಸಿ ಪ್ರಿಜ್ ನಲ್ಲಿಟ್ಟಿದ್ದನ್ನು ಗಮನಿಸಿದ ತಂಡ, ಅಂಗಡಿಗಳನ್ನು ಕೂಡ ಸೀಜ್ ಮಾಡಲಾಗಿದೆ. ಸ್ಥಳಕ್ಕೆ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು, ನಗರಸಭೆ ಹಾಗೂ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!