ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತದ ಉಯೋನ್ಮುಖ ಆಟಗಾರ ಲಕ್ಷ್ಯ ಸೇನ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಟೂರ್ನಿಯ ಎರಡನೇ ಸುತ್ತಿನಲ್ಲಿ ಸೈನಾ ಹಾಗೂ ಪಿವಿ ಸಿಂಧು ನೋತು ಹೊರಬೀಳುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂ.3 ಆಟಗಾರ ಆಂಡ್ರಸ್ ಅಂಟೋನ್ಸೆನ್ ವಿರುದ್ಧ ಜಯ ಸಾಧಸುವ ಮೂಲಕ ಲಕ್ಷ್ಯ ಸೇನ್ ಕ್ವಾಟರ್ ಫೈನಲ್ ಗೆ ಮುನ್ನಡೆದರು. ಸೇನ್ 21-16, 21-18 ನೇರ ಗೇಮ್‍ಗಳಿಂದ ಎದುರಾಳಿಯನ್ನು ಮಣಿಸಿದ್ದು ವಿಶೇಷವಾಗಿತ್ತು. ಇವರಿಬ್ಬರು ಮುಖಾಮುಖಿ ಆದದ್ದು ಇದೇ ಮೊದಲು. ಸೇನ್ ಆವರಿನ್ನು ಚೀನದ ಲು ಗುವಾಂಗ್ ಜು ಅವರನ್ನು ಎದುರಿಸಲಿದ್ದಾರೆ.
ಇನ್ನು ಮಹಿಳಾ ಸಿಂಗಲ್ಸ್ ನಲ್ಲಿ ಭಾರತದ ಪಿ.ವಿ.ಸಿಂಧು, ಜಪಾನ್‍ನ ತಕಹಶಿ ವಿರುದ್ಧ ಎರಡನೇ ಸುತ್ತಿನ ಪಂದ್ಯದಲ್ಲಿ 19-21, 21-16, 17-21ರಿಂದ ಸೋತು ಟೂರ್ನಿಯಿಂದ ನಿರ್ಗಮಿಸಿದರು. ಮೊದಲ ಸೆಟ್ ಕಳೆದುಕೊಂಡ ಸಿಂಧು ಬೇಗನೇ ಚೇತರಿಸಿಕೊಂಡು ಎರಡನೇ ಸೆಟ್ ಗೆದ್ದುಕೊಂಡರು. ಆದರೆ ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಸಯಾಕಾ ತಕಹಶಿ ಮೇಲುಗೈ ಸಾಧಿಸಿದರು. ಇದರೊಂದಿಗೆ ಸಿಂಧು ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಸೈನಾ ನೆಹ್ವಾಲ್ ಸಹ ವಿಶ್ವದ 2ನೇ ಶ್ರೇಯಾಂಕಿತೆ ಜಪಾನ್‍ನ ಅಕಾನೆ ಯಮಗುಚಿ ವಿರುದ್ಧ 14-21, 21-17,17-21ರಲ್ಲಿ ಸೋಲು ಕಾಣುವ ಮೂಲಕ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತೀಯರ ಸವಾಲು ಅಂತ್ಯವಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ