ಢಾಕಾದಲ್ಲಿ ಮತ್ತೆ ಮುಂದುವರಿದಿದೆ ಹಿಂದು ದೇವಸ್ಥಾನಗಳ ಮೇಲಿನ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್
ಢಾಕಾ: ಗುರುವಾರ ರಾತ್ರಿ ಮುಸ್ಲಿಂ ಗುಂಪು ಬಾಂಗ್ಲಾದೇಶದ ಢಾಕಾ ವಿಭಾಗದ ವಾರಿಯ ಲಾಲ್ಮೋಹನ್ ಸಹಾ ಸ್ಟ್ರೀಟ್‌ನಲ್ಲಿರುವ ಇಸ್ಕಾನ್ ದೇವಾಲಯದ ಮೇಲೆ ದಾಳಿ ಮಾಡಿದೆ. ಈ ಬೆಳವಣಿಗೆಯನ್ನು ಶ್ರೀರಾಧಾಕಾಂತ ಜಿಯು ಮಂದಿರದ ಆಡಳಿತವು ಖಚಿತಪಡಿಸಿದೆ.
ಹಿಂದು ಅಮೆರಿಕನ್ ಫೌಂಡೇಶನ್ (ಎಚ್‌ಎಎಫ್) ಪ್ರಕಾರ, ಈ ಭೀಕರ ದಾಳಿಯನ್ನು 62ವರ್ಷದ ಹಾಜಿ ಶಫಿವುಲ್ಲಾ ಆಯೋಜಿಸಿದ್ದಾರೆ. ಅವರ ನಿರ್ದೇಶನದ ಮೇರೆಗೆ, 150-200 ಜನರ ಇಸ್ಲಾಂ ಗುಂಪು ಇಸ್ಕಾನ್ ದೇವಾಲಯದ ಮೇಲೆ ಮುತ್ತಿಗೆ ಹಾಕಿತು. ಗುಂಪು ವಿಗ್ರಹಗಳನ್ನು ಅಪವಿತ್ರಗೊಳಿಸಿ, ದೇವಾಲಯದ ಆವರಣವನ್ನು ಧ್ವಂಸಗೊಳಿಸಿತು. ಹಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದೆ.
ಮಾಧ್ಯಮಗಳ ವರದಿ ಪ್ರಕಾರ, ದಾಳಿಯ ಸಂದರ್ಭದಲ್ಲಿ ಮೂವರು ಭಕ್ತರಾದ ಸುಮಂತ್ರ ಚಂದ್ರ ಶ್ರವಣ್, ನಿಹಾರ್ ಹಲ್ದಾರ್ ಮತ್ತು ರಾಜೀವ್ ಭದ್ರ ಗಾಯಗೊಂಡಿದ್ದಾರೆ. ಜನಪ್ರಿಯ ಟ್ವಿಟರ್ ಹ್ಯಾಂಡಲ್ ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದುಸ್ ಶ್ರೀರಾಧಾಕಾಂತ ಜಿಯು ಮಂದಿರಕ್ಕೆ ಉಂಟಾದ ಹಾನಿಯ ಪ್ರಮಾಣವನ್ನು ಪ್ರದರ್ಶಿಸುವ ದೃಶ್ಯಗಳು ಹಾಗೂ ಚಿತ್ರಗಳನ್ನು ಹಂಚಿಕೊಂಡಿದೆ.

ಢಾಕಾದಲ್ಲಿರುವ ರಾಧಾಕಾಂತ ಇಸ್ಕಾನ್ ದೇವಾಲಯದ ಮೇಲೆ ದಾಳಿ ನಡೆಯುತ್ತಿದೆ. ಭಕ್ತರು ಪೊಲೀಸರಿಗೆ ಮಾಹಿತಿ ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟ್ವಿಟರ್ ಹ್ಯಾಂಡಲ್ ಪೋಸ್ಟ್ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!