ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದಲ್ಲಿ ಏಪ್ರಿಲ್1 ರಿಂದ ಎಲ್ಲಾ ಓಪನ್ ಏರ್ ಬಾರ್‌ಗಳನ್ನು ಮುಚ್ಚಲಾಗುತ್ತದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಮದ್ಯ ಕುಡಿಯುವುದಕ್ಕೆ ನಿಷೇಧ ಇಲ್ಲ, ಮನೆಗೆ ತೆಗೆದುಕೊಂಡು ಹೋಗಿ ಕುಡಿಯಬಹುದು, ಓಪನ್ ಏರ್ ಬಾರ್‌ಗಳನ್ನು ತೆರೆಯಲು ಅವಕಾಶ ಇಲ್ಲ ಎಂದು ಹೇಳಿದ್ದಾರೆ.
ಸಂಪುಟ ಸಭೆಯಲ್ಲಿ ಈ ನಿರ್ಣಯಕ್ಕೆ ಅನುಮೋದನೆ ದೊರೆತಿತ್ತು. ಮದ್ಯವನ್ನು ಅಂಗಡಿಯ ಕೌಂಟರ್‌ನಿಂದ ಖರೀದಿ ಮಾಡಬಹುದು ಆದರೆ ಓಪನ್ ಏರ್ ಬಾರ್ ತೆರೆಯುವಂತಿಲ್ಲ ಎನ್ನಲಾಗಿದೆ.