ಇಂದಿನಿಂದ ಸಂಸತ್ತಿನ 2ನೇ ಹಂತದ ಬಜೆಟ್ ಸಭೆ: ಹಲವು ಮಸೂದೆಗಳಿಗೆ ಅನುಮೋದನೆ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಸಂಸತ್ತಿನ ಬಜೆಟ್‌ ಅಧಿವೇಶನದ ಎರಡನೇ ಭಾಗ ಇಂದಿನಿಂದ ಆರಂಭವಾಗಲಿದೆ. ಅಧಿವೇಶನದ ಎರಡನೇ ಹಂತದಲ್ಲಿ ಒಟ್ಟು 17 ಸಿಟ್ಟಿಂಗ್‌ಗಳು ನಡೆಯಲಿದ್ದು, ಮುಂದಿನ ತಿಂಗಳು ಏಪ್ರಿಲ್ 6ರ ವರೆಗೆ ನಡೆಯಲಿದೆ.

ಈ ಸಭೆಗಳಲ್ಲಿ ಕೇಂದ್ರ ಬಜೆಟ್ ಅನುಮೋದನೆ ಹಾಗೂ ಅನುದಾನದ ಕುರಿತು ಚರ್ಚೆ ನಡೆಯಲಿದೆ. ಅದೇ ರೀತಿ ಮಹತ್ವದ ವಿಧೇಯಕಗಳು ಅನುಮೋದನೆಗಾಗಿ ಸಂಸತ್ ಮುಂದೆ ಬರಲಿವೆ. ಪ್ರಸ್ತುತ ಸಂಸತ್ತಿನ ಉಭಯ ಸದನಗಳಲ್ಲಿ 35 ಮಸೂದೆಗಳು ಬಾಕಿ ಇವೆ. ಈ ಪೈಕಿ 26 ಮಸೂದೆಗಳು ರಾಜ್ಯಸಭೆಯಲ್ಲಿ ಮತ್ತು ಒಂಬತ್ತು ಮಸೂದೆಗಳು ಲೋಕಸಭೆಯಲ್ಲಿ ಬಾಕಿ ಉಳಿದಿವೆ.

ಸಂಸತ್ತಿನ ಮುಂದೆ ಪ್ರಮುಖ ಮಸೂದೆಗಳು

ಜೀವವೈವಿಧ್ಯ (ತಿದ್ದುಪಡಿ) ಮಸೂದೆ – 2021, ವೈಯಕ್ತಿಕ ದತ್ತಾಂಶಗಳ ರಕ್ಷಣೆ ಮಸೂದೆ, ಅಂತರ-ರಾಜ್ಯ ನದಿ ನೀರು ವಿವಾದಗಳ (ತಿದ್ದುಪಡಿ) ಮಸೂದೆ- 2019, ಪರಿಶಿಷ್ಟ ಪಂಗಡಗಳ ಮೂರನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ-2022, ಪರಿಶಿಷ್ಟ ಪಂಗಡಗಳ ಐದನೇ ಸಾಂವಿಧಾನಿಕ ಪರಿಷತ್ತು, ತಮಿಳುನಾಡು 202ಜಿ. ರದ್ದತಿ) ಮಸೂದೆ, ಸಂಸತ್ತಿನ ಅಸೆಂಬ್ಲಿ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯ ಮರುಸಂಘಟನೆ (ಮೂರನೇ) ಮಸೂದೆ – 2013, ದೆಹಲಿ ಟೆನೆನ್ಸಿ (ನಿರ್ಮೂಲನೆ) ಮಸೂದೆ, ಪರಿಶಿಷ್ಟ ಪಂಗಡಗಳ ಸಂವಿಧಾನ ತಿದ್ದುಪಡಿ ಮಸೂದೆ 2019, ಉದ್ಯೋಗ ವಿನಿಮಯ (ಖಾಲಿ ಹುದ್ದೆಗಳ ಕಡ್ಡಾಯ ಅಧಿಸೂಚನೆ) ತಿದ್ದುಪಡಿ ಮಸೂದೆ.

ಅದೇ ರೀತಿ ಇಂಡಿಯನ್ ಮೆಡಿಸಿನಲ್ ಹೋಮಿಯೋಪತಿ ಫಾರ್ಮಸಿ ಬಿಲ್ 2013, ಗಣಿ ತಿದ್ದುಪಡಿ ಮಸೂದೆ, ರಾಜಸ್ಥಾನ ಲೆಜಿಸ್ಲೇಟಿವ್ ಕೌನ್ಸಿಲ್ ಬಿಲ್ 2013, ದಿ ಸೀಡ್ಸ್ ಬಿಲ್, ದಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ತಿದ್ದುಪಡಿ) ಬಿಲ್, ವಕ್ಫ್ ಆಸ್ತಿ (ಅನಧಿಕೃತ ತೆರವು) 201 ಅಕ್ರಮ ಒತ್ತುವರಿ ಬಿಲ್ 2021, ಸಿನಿಮಾಟೋಗ್ರಾಫ್ ತಿದ್ದುಪಡಿ ಮಸೂದೆ, ವಿದ್ಯುತ್ ತಿದ್ದುಪಡಿ ಮಸೂದೆ, ಡಿಎನ್‌ಎ ತಂತ್ರಜ್ಞಾನ (ಬಳಕೆ ಮತ್ತು ಅಪ್ಲಿಕೇಶನ್) ನಿಯಂತ್ರಣ ಮಸೂದೆ 2019, ಪೋಷಕರು, ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ (ತಿದ್ದುಪಡಿ) ಮಸೂದೆ-2019 ಬಾಕಿ ಉಳಿದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!