ರೈಲ್ವೆ ನಿಲ್ದಾಣದಲ್ಲಿ ನಲ್ಲಿ ಮುರಿದು ರೈಲಿನಲ್ಲಿ ಹೋಗೋರಿಗೆಲ್ಲಾ ಸ್ನಾನಭಾಗ್ಯ! ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೈಲ್ವೆ ನಿಲ್ದಾಣದಲ್ಲಿ ಬಾತ್‌ರೂಂಗೆ ಹೋಗಬಹುದು, ಹಲ್ಲುಜ್ಜಿ ಮುಖ ಕೂಡ ತೊಳೆಯಬಹುದು, ಆದರೆ ಈ ರೈಲ್ವೆ ನಿಲ್ದಾಣದಲ್ಲಿ ಸ್ನಾನ ಮಾಡೋಕೆ ಕೂಡ ಅವಕಾಶ ಇದೆ.

ನೀವು ಸ್ನಾನ ಮಾಡೋಕೆ ನಲ್ಲಿ ಬಳಿ ಹೋಗಬೇಕಿಲ್ಲ, ನಲ್ಲಿಯೇ ನಿಮ್ಮ ಬಳಿ ಬಂದು ಸ್ನಾನ ಮಾಡಿಸುತ್ತಿದೆ. ಹೌದು, ನಿಲ್ದಾಣದಲ್ಲಿ ಕೈ ತೊಳೆಯುವ ನಲ್ಲಿಯೊಂದು ಒಡೆದು ಹೋಗಿದ್ದು, ಹೆಚ್ಚು ಫೋರ್ಸ್‌ನಲ್ಲಿ ನೀರು ಹೊರಹೋಗುತ್ತಿದೆ. ಅದರ ದಾರಿಗೆ ಯಾರೇ ಅಡ್ಡ ಬಂದರೂ ಸ್ನಾನ ಖಾಯಂ.

ಜನ ಅದಕ್ಕೆ ಅಡ್ಡ ಬರದೆ ಸುತ್ತಿ ಬಳಸಿ ಓಡಾಡಬಹುದು, ಆದರೆ ರೈಲು ಏನು ಮಾಡಲು ಸಾಧ್ಯ? ರೈಲಿನಲ್ಲಿದ್ದ ಪ್ರಯಾಣಿಕರು ಸ್ನಾನ ಮಾಡಿರಲಿ ಬಿಟ್ಟಿರಲಿ ಅವರಿಗೊಂದು ರೌಂಡ್ ಸ್ನಾನ ಗ್ಯಾರೆಂಟಿ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ರೈಲ್ವೆ ಇಲಾಖೆಯಿಂದ ಹೊಸ ಸ್ನಾನಸೇವೆ ಎಂಬ ಕ್ಯಾಪ್ಷನ್ ನೀಡಿದ್ದಾರೆ. ನೀರು ಪೋಲಾಗುತ್ತಿದೆ ಬೇಗ ಸರಿ ಮಾಡಿಸಿ ಎಂದು ಕೆಲ ಪರಿಸರ ಪ್ರೇಮಿಗಳು ಹೇಳಿದರೆ ಇನ್ನೂ ಹಲವರು ಜನರನ್ನು ನಿದ್ದೆ ಇಂದ ಎಬ್ಬಿಸಲು, ಮನೆಗೆ ಫ್ರೆಶ್ ಆಗಿ ಹೋಗಲಿ ಎಂದು ಹೀಗೆ ಮಾಡಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!