July 29, 2026
Wednesday, July 29, 2026
spot_img

ಡಿಎಂಕೆ ಜೊತೆಗಿನ ಮೈತ್ರಿಕೂಟ ತೊರೆಯಲ್ಲ: ನಟ ವಿಜಯ್ ಗೆ ಬೆಂಬಲ ನಿರಾಕರಿಸಿದ ಎಡಪಕ್ಷಗಳು, ಮುಸ್ಲಿಂ ಲೀಗ್​!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಕಸರತ್ತು ನಡೆಸುತ್ತಿದ್ದು, ಈಗಾಗಲೇ ಬಹುಮತಕ್ಕೆ ಕಾಂಗ್ರೆಸ್ ಬೆಂಬಲ ನೀಡಿದೆ.

ಆದರೆ ಉಳಿದ ಸೀಟುಗಳಿಗೆ ಸಣ್ಣ ಪುಟ್ಟ ಪಕ್ಷಗಳ ಬೆಂಬಲವನ್ನು ಕೋರಿದ ನಟ ವಿಜಯ್ ಗೆ ನಿರಾಸೆ ಮೂಡಿದ್ದು, ಎಡಪಕ್ಷಗಳು ಮತ್ತು ಮುಸ್ಲೀಂ ಲೀಗ್ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದೆ.

ಡಿಎಂಕೆಯ ಮಿತ್ರ ಪಕ್ಷವಾದ ವಿಸಿಕೆ ಬಳಿ ವಿಜಯ್ ಪಕ್ಷವು ಬೆಂಬಲ ಕೋರಿದ್ದು, ಆದರೆ ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ನಮ್ಮ ಪಕ್ಷದ ಅಧ್ಯಕ್ಷ ಥೋಲ್ ತಿರುಮಾವಲವನ್ ಅವರು ಬೆಂಬಲ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವಿಸಿಕೆ ಪಕ್ಷದ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಪಿಐ(ಎಂ), ಸಿಪಿಐನಲ್ಲಿ ಗೆದ್ದ ಶಾಸಕರು, ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿ ಜೊತೆಯಲ್ಲಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಐಯುಎಂಎಲ್ ಪಕ್ಷದಿಂದ ಆಯ್ಕೆಯಾದ ಶಾಸಕರು ಕೂಡ ಮೈತ್ರಿಕೂಟ ತೊರೆಯಲ್ಲ ಎಂದಿದ್ದಾರೆ.

ಇತ್ತ ಬಹುಮತ ಸಾಬೀತುಪಡಿಸಿದ ಮೇಲೆಯೇ ಪ್ರಮಾಣ ವಚನ ಕಾರ್ಯಕ್ರಮ ನಡೆಸೋಣ ಎಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ತಿಳಿಸಿದ್ದು, ಇದರಿಂದಾಗಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಬಹುಮತಕ್ಕಾಗಿ ಸೀಟು ಹೊಂದಾಣಿಕೆ ನಡೆಸುವಲ್ಲಿ ತೊಡಗಿಕೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !