67ನೇ ಸೌತ್ ಫಿಲ್ಮ್ ಫೇರ್: ಪ್ರಶಸ್ತಿಗಳನ್ನು ಕ್ಲೀನ್ ಸ್ವೀಪ್ ಮಾಡಿದ ʻಪುಷ್ಪʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

67ನೇ ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ಸಂಜೆ ಬೆಂಗಳೂರು ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ದಕ್ಷಿಣ ಚಿತ್ರರಂಗದ ಗಣ್ಯರು ಆಗಮಿಸಿ ಮಿಂಚಿನ ಹೊಳೆ ಹರಿಸಿದರು.ಕನ್ನಡ, ತೆಲುಗು, ತಮಿಳು, ಮಲಯಾಳಂ ಚಲನಚಿತ್ರೋದ್ಯಮಗಳಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗೆ ಈ ಪ್ರಶಸ್ತಿಗಳನ್ನು ನೀಡಲಾಯಿತು.

ಈ ಪ್ರಶಸ್ತಿಗಳಲ್ಲಿ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಮತ್ತು ‘ಅಲಾ ವೈಕುಂಠಪುರಂ’ ಸಿನಿಮಾ ಎಲ್ಲಾ ಪ್ರಶಸ್ತಿಗಳನ್ನು ಕೊಳ್ಳೆ ಹೊಡೆದಿವೆ.  ಮುರಳಿ ಶರ್ಮಾ, ತಬು ಮತ್ತು ಶೇಖರ್ ಮಾಸ್ಟರ್ ಪ್ರಶಸ್ತಿಗಳನ್ನು ಪಡೆದರು. “ಪುಷ್ಪಾ ದಿ ರೈಸ್” ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ.

Allu Arjun Movie Pushpa Clean Sweep the Filmfare Awards

ಅಲ್ಲದೆ ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್, ಗಾಯಕರಾದ ಸಿದ್ದಿ ಶ್ರೀರಾಮ್ ಮತ್ತು ಇಂದ್ರಾವತಿ ಚೌಹಾಣ್, ಕ್ಯಾಮೆರಾ ಮ್ಯಾನ್ ಮೀರೋಸ್ಲಾ ಕುಬಾ ಬ್ರಜಕ್ ಎಲ್ಲರೂ ʻಪುಷ್ಪʼ ಚಿತ್ರದ ಮೂಳಕ ಪ್ರಶಸ್ತಿಗಳನ್ನು ಪಡೆದರು. ಎಲ್ಲಾ ವಿಭಾಗಗಳಲ್ಲೂ ಪುಷ್ಟ ಸಿನಿಮಾ ಪ್ರಶಸ್ತಿಗಳನ್ನು ಕ್ಲೀನ್ ಸ್ವೀಪ್ ಮಾಡಿದ್ದೇನೆ ಎಂದು ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!