Saturday, March 25, 2023

Latest Posts

ಅಲಸ್ಕಾ ಪ್ರಾಂತ್ಯದಲ್ಲಿ ಆಕಾಶಕಾಯ ಹೊಡೆದುರುಳಿಸಿದ ಅಮೆರಿಕ, ಇದರ ಹಿಂದೆ ಚೀನಾ ಕೈವಾಡ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಅಲಾಸ್ಕ ಪ್ರಾಂತ್ಯದ ಆಕಾಶದಲ್ಲಿ ಅಮೆರಿಕದ ಯುದ್ಧವಿಮಾನಗಳು ಅಪರಿಚಿತ ಆಕಾಶಕಾಯವೊಂದನ್ನು ಹೊಡೆದುರುಳಿಸಿವೆ.

ಈ ಬಗ್ಗೆ ಅಮೆರಿಕ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ ಬಿ ಮಾಹಿತಿ ನೀಡಿದ್ದು, ಇದು ಯಾವ ಆಕಾಶಕಾಯ, ಎಲ್ಲಿಂದ ಬಂತು, ಅದರೊಳಗೆ ಏನೆಲ್ಲಾ ಇತ್ತು ಎನ್ನುವ ಮಾಹಿತಿ ದೊರಕಿಲ್ಲ. ಅಧ್ಯಕ್ಷರು ಆಕಾಶಕಾಯವನ್ನು ಹೊಡೆದುರುಳಿಸಿ ಎಂದು ಆದೇಶ ನೀಡಿದ್ದು, ಸೇನೆ ಅದರಂತೆ ನಡೆದುಕೊಂಡಿದೆ ಎಂದು ಹೇಳಿದ್ದಾರೆ.

ಕಳೆದ ವಾರ ಅಮೆರಿಕದ ಅಟ್ಲಾಂಟಿಕ್ ಸಾಗರದ ಬಳಿ ಆಕಾಶದಲ್ಲಿ ಕಾಣಿಸಿದ್ದ ಚೀನಾದ ಬೃಹತ್ ಬಲೂನ್‌ಗೆ ಹೋಲಿಸಿದರೆ ಇದರ ಗಾತ್ರ ಸಣ್ಣದಾಗಿತ್ತು ಎನ್ನಲಾಗಿದೆ. ನೆಲದಿಂದ ಸುಮಾರು 40 ಸಾವಿರ ಅಡಿ ಎತ್ತರದಲ್ಲಿ ಆಕಾಶಕಾಯ ಹಾರಾಡುತ್ತಿತ್ತು. ಕೆನಡಾ ಗಡಿಯ ಉತ್ತರ ಅಲಾಸ್ಕ ಬಳಿ ಅದರ ಎತ್ತರ ಕಡಿಮೆಯಾಗುತ್ತಿರುವುದು ಕಾಣಿಸಿದ್ದು, ಸೇನೆ ತಕ್ಷಣ ಪ್ರತಿಕ್ರಿಯೆ ನೀಡಿದೆ. ಕೆನಡಾ ಗಡಿಯ ಹೆಪ್ಪುಗಟ್ಟಿದ ನೀರಿನಲ್ಲಿ ಅವಶೇಷಗಳು ಬಿದ್ದಿದ್ದು, ಅವುಗಳನ್ನು ಸಂಗ್ರಹಣೆ ಮಾಡಲಾಗುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!