Tuesday, March 28, 2023

Latest Posts

ಕಳೆದ 3 ವರ್ಷಗಳಲ್ಲಿ 2.58 ಲಕ್ಷಕೋಟಿ ರೂ.ಗಳಷ್ಟಾಗಿದೆ ಭಾರತದ ರಕ್ಷಣಾ ಉತ್ಪಾದನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಳೆದ 3 ವರ್ಷಗಳಲ್ಲಿ ಭಾರತದ ದೇಶೀಯ ರಕ್ಷಣಾ ಉತ್ಪಾದನೆಯು 2.58 ಲಕ್ಷಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಭಾರತ ಸರ್ಕಾರವು ಸಂಸತ್ತಿನಲ್ಲಿ ಮಾಹಿತಿ ನೀಡಿದೆ. ಈ ಕುರಿತು 2019-20 ರಿಂದ 2021-22 ರವರೆಗಿನ ಅಂಕಿ ಅಂಶಗಳನ್ನು ಲೋಕಸಭೆಯಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ನೀಡಿದ್ದಾರೆ.

ಅವರ ನೀಡಿರೋ ಮಾಹಿತಿಯ ಪ್ರಕಾರ, ಭಾರತದಲ್ಲಿ 2019-20ರಲ್ಲಿ 79,071 ಕೋಟಿ ರೂ. 2020-21ರಲ್ಲಿ 84,643 ಕೋಟಿ ರೂ. 2021-2022 ರಲ್ಲಿ 94,846 ಕೋಟಿ ರೂಪಾಯಿಗಳಷ್ಟು ದೇಶೀಯವಾಗಿ ರಕ್ಷಣಾ ಉತ್ಪಾದನೆ ಸಾಧಿಸಲಾಗಿದೆ. ಅಂದರೆ ಒಟ್ಟಾರೆಯಾಗಿ 2,58,560 ಕೋಟಿ ರೂಪಾಯಿ ಗಳಷ್ಟು ರಕ್ಷಣಾ ಉತ್ಪಾದನೆ ಮಾಡಲಾಗಿದೆ.

‘ದೇಶದಲ್ಲಿ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಗೆ ಉತ್ತೇಜನ ನೀಡುವ ಸಲುವಾಗಿ, ಭಾರತ ಸರ್ಕಾರವು ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ‘ ಎರಡು ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳನ್ನು (ಡಿಐಸಿ) ಸ್ಥಾಪಿಸಿದೆʼ ಎಂದು ಅವರು ಹೇಳಿದರು.

ರಕ್ಷಣಾ ಸಚಿವಾಲಯವು ಮುಂದಿನ ಐದು ವರ್ಷಗಳಲ್ಲಿ 25 ಶತಕೋಟಿ ಡಾಲರ್ (Rs 1.75 ಲಕ್ಷ ಕೋಟಿ‌) ರಕ್ಷಣಾ ಉತ್ಪಾದನೆಯ ವಹಿವಾಟಿನ ಗುರಿಯನ್ನು ಹೊಂದಿದೆ, ಇದರಲ್ಲಿ 5 ಶತಕೋಟಿ ಡಾಲರ್ ಮೌಲ್ಯದ ಮಿಲಿಟರಿ ಸಾಮಗ್ರಿಗಳ ರಫ್ತು ಗುರಿ ಹೊಂದಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಫೆಬ್ರವರಿ 6ರವರೆಗೆ 10,642 ಕೋಟಿ ರೂ. ರಕ್ಷಣಾ ಸಾಮಗ್ರಿಗಳ ರಫ್ತು ಸಾಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!