ಆಹಾರಕ್ಕೆ ಹಾಹಾಕಾರ: ವಿಶ್ವ ಸಂಸ್ಥೆಯಲ್ಲಿ ಅಮೇರಿಕ-ರಷ್ಯಾ ಜಟಾಪಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಏರುತ್ತಿರುವ ಆಹಾರ ಬೆಲೆಯ ಕುರಿತಾಗಿ ಅಮೇರಿಕ ಮತ್ತು ರಷ್ಯಾ ನಡುವೆ ವಿಶ್ವಸಂಸ್ಥೆಯಲ್ಲಿ ಘರ್ಷಣೆ ನಡೆಯಿತು.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ  ‍”ಹೆಚ್ಚುತ್ತಿರುವ ಗೋಧಿ ಬೆಲೆ ಮತ್ತು ಉಕ್ರೇನ್‍ನಿಂದ ಆಮದು ಕೊರತೆಯಿಂದಾಗಿ ಯೆಮೆನ್ ಸಂಕಷ್ಟಕ್ಕೆ ಸಿಲುಕಿದೆ” ಎನ್ನುವ ಮೂಲಕ ಅಮೇರಿಕದ ಲಿಂಡಾ ಥಾಮಸ್  ವಿಶ್ವದಲ್ಲಿ ಉಂಟಾಗುತ್ತಿರುವ ಆಹಾರ ಬಿಕ್ಕಟ್ಟಿಗೆ ರಷ್ಯಾ ನೇರ ಹೊಣೆ ಎಂದು ಆರೋಪಿಸಿದರು.

ಇದಕ್ಕೆ ಪ್ರತ್ಯುತ್ತರವಾಗಿ ವಿಶ್ವಸಂಸ್ಥೆಯ  ರಷ್ಯಾ ಉಪಕಾರ್ಯದರ್ಶಿ ಡಿಮಿಟ್ರಿ ಪೊಲೆನ್ಸ್ಕಿ “ಅಮೇರಿಕವು ನಿಜವಾಗಿಯೂ ಆಹಾರ ಬಿಕ್ಕಟ್ಟಿನ ವಿರುದ್ಧ ಹೋರಾಡುತ್ತಿದ್ದರೆ ವಿಧಿಸಿರುವ ನಿರ್ಬಂಧಗಳನ್ನು ಈಗಲೇ ತೆಗೆದು‌ ಹಾಕಲಿ. ನಿರ್ಬಂಧಗಳು ಅಮೇರಿಕದ ಆಯ್ಕೆಯೇ ಆಗಿದ್ದು ಇದರಿಂದ ಬಡ ರಾಷ್ಟ್ರಗಳು ತಕ್ಷಣವೇ ವ್ಯತಿರಿಕ್ತ ಪರಿಣಾಮ ಅನುಭವಿಸುವಂತಾಗಿದೆ” ಎಂದು ಕುಟುಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!