ಅಮೆರಿಕಾದ ಪ್ರಥಮ ಮಹಿಳೆ, ಜೋ ಬೈಡನ್ ಪತ್ನಿ ಜಿಲ್ ಗೆ ಕೊರೋನಾ ಪಾಸಿಟಿವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕಾ ಅಧ್ಯಕ್ಷ ಬೈಡನ್ ಬಳಿಕ ಪ್ರಥಮ ಮಹಿಳೆ ಜಿಲ್ ಬೈಡನ್‌ಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ದಕ್ಷಿಣ ಕೆರೊಲಿನಾದಲ್ಲಿ ಪ್ರಥಮ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಸೌಮ್ಯ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದಾರೆ ಮತ್ತು ಫೈಜರ್ ಇಂಕ್ʼನ ಪ್ಯಾಕ್ಸ್ಲೋವಿಡ್ ಆಂಟಿವೈರಲ್ ಔಷಧಗಳ ಕೋರ್ಸ್ ಶಿಫಾರಸು ಮಾಡಲಾಗಿದೆ ಅಧ್ಯಕ್ಷೀಯ ಕಚೇರಿ ತಿಳಿಸಿದೆ.
71 ವರ್ಷದ ಪ್ರಥಮ ಮಹಿಳೆ ದಕ್ಷಿಣ ಕೆರೊಲಿನಾದ ಖಾಸಗಿ ನಿವಾಸದಲ್ಲಿ ಉಳಿಯಲಿದ್ದು, ಎರಡು ನೆಗೆಟಿವ್ ಕೋವಿಡ್ ಪರೀಕ್ಷೆಗಳನ್ನ ಪಡೆದ ನಂತರ ಮನೆಗೆ ಮರಳಲಿದ್ದಾರೆ ಎಂದು ಶ್ವೇತಭವನ ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!