ಹೊಸದಿಗಂತ ವರದಿ ಬೆಂಗಳೂರು :
ಅನಿವಾಸಿ ಕರಾವಳಿಗರು ಕಟ್ಟಿ ಬೆಳೆಸಿದ ಕರಾವಳಿ ಐಕ್ಯತಾ ವೇದಿಕೆ ಬೆಂಗಳೂರು ಸಂಘಟನೆಯ 4ನೇ ವಾರ್ಷಿಕ ಸಂದರ್ಭದಲ್ಲಿ ರಮ್ಝಾನ್ ಪ್ರಯುಕ್ತ ಸರ್ವಧರ್ಮಗಳ ವೈವಿದ್ಯತೆಯಿಂದ ಕೂಡಿದ ‘ಇಫ್ತಾರ್ ಮೀಟ್’ ಕಾರ್ಯಕ್ರಮವನ್ನು ಟಿ.ಕೆ. ಕನ್ವೇಷನ್ ಹಾಲ್ ನಲ್ಲಿ ಭಾನುವಾರ ಸಂಜೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೌಷಾದ್ ವಹಿಸಿದ್ದರು. ಹಾಫಿಝ್ ಆಶಿಕ್ ಹಾರೂನಿ ಕಿರಾಅತ್ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಂಝ ಫೈಝಿ ತೋಡಾರ್ ಮಾತನಾಡಿ, ಇಫ್ತಾರ್ ಬಗ್ಗೆ ನೆರೆದಿದ್ದ ಜನರಲ್ಲಿ ಸರಳವಾಗಿ ಮನ ಮುಟ್ಟುವಂತೆ ಉಪದೇಶ ನೀಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬದ್ರುದ್ದಿನ್ ಮಾಣಿ, ಜುನೈದ್ ಪಿ.ಕೆ, ಸಾದಿಕ್ ಬರೆಪ್ಪಾಡಿ, ಡಾ.ಬಿ.ಎಂ.ಉಮ್ಮರ್ ಹಾಜಿ, ಅಬೂಬಕ್ಕರ್ ಹೆಚ್, ಹಮೀದ್ ಹಸನ್ ಮಾಡೂರು, ಅಶ್ರಫ್ ಪಿ.ಎಂ, ನಾಸೀರ್ ವಿ.ಕೆ.ಸಯ್ಯದ್ ಮುರಾದ್, ಖಲೀಮುಲ್ಲಾ, ಬಶೀರ್ ಪುಣಚ ಭಾಗಿಯಾಗಿ ಕಾರ್ಯಕ್ರಮದ ಬಗ್ಗೆ ಮಾತನಾಡಿ ಮೆಚ್ಚುಗೆಯ ಹಿತ ವಚನ ತಿಳಿಸಿದರು. ಹಾಗೂ ಈ ಸಂಘಟನೆಯು ಕೇವಲ ನಾಲ್ಕು ವರ್ಷಗಳಲ್ಲಿ ಜಾತಿ ಮತ ಭೇದವಿಲ್ಲದೇ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದನ್ನು ಸ್ಮರಿಸಿದರು. ಇಂತಹ ಕಾರ್ಯಕ್ರಮವು ಇತರರಿಗೂ ಸ್ಫೂರ್ತಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯ ಅತಿಥಿಗಳಿಗೆ ಸ್ಮರಣಿಕೆ ಕೊಟ್ಟು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳೆಯರು ಕೂಡ ಭಾಗಿಯಾಗಿದ್ದರು. ಕಾರ್ಯಕ್ರಮವು ಅಚ್ಚು ಕಟ್ಟಾಗಿ ಯಶಸ್ವಿಯಾಗಿ ನಡೆಯಲು ಸಾಮಾಜಿಕ ಜಾಲತಾಣದ ಮೂಲಕ ಮಾಧ್ಯಮ ಸಲಹೆಗಾರರಾದ ಅಲಿ ಹಾಗೂ ಸಂಘಟನೆಯ ಸಕ್ರಿಯ ಕಾರ್ಯಕರ್ತರು ಶ್ರಮವಹಿಸಿದರು. ನಿರೂಪಣೆಯನ್ನು ಇರ್ಫಾನ್ ಕಲ್ಲಡ್ಕ ನಿರೂಪಿಸಿ ಕಾರ್ಯಕ್ರಮವನ್ನು ಸಮಾಪ್ತಿ ಗೊಳಿಸಲಾಯಿತು.



