ಆತ ಕ್ರಿಮಿನಲ್‌.., ನನ್ನ ಮೇಲೆ ದಾಳಿಗೆ ಸಂಚು ರೂಪಿಸಿದ್ದ: ಕಣ್ಣೂರು ವಿವಿ ವಿಸಿ ವಿರುದ್ಧ ಕೇರಳ ರಾಜ್ಯಪಾಲ ಆರಿಫ್ ಖಾನ್ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಕಣ್ಣೂರು ವಿಶ್ವವಿದ್ಯಾನಿಲಯದ ಉಪಕುಲಪತಿ (ವಿಸಿ) ಅವರನ್ನು ʼಕ್ರಿಮಿನಲ್ʼ ಎಂದು ಕರೆಯುವ ಮೂಲಕ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಆಂದೋಲನಗಳು ನಡೆಯುತ್ತಿದ್ದಾಗ ಉಪಕುಲಪತಿ ಗೋಪಿನಾಥ್ ರವೀಂದ್ರನ್ ನನ್ನನ್ನು  ವಿಶ್ವವಿದ್ಯಾನಿಲಯಕ್ಕೆ ಆಹ್ವಾನಿಸಿ ನನ್ನ ಮೇಲೆ ಯೋಜಿತ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಆರಿಫ್‌ ಮೊಹಮದ್‌ ಆರೋಪಿಸಿದ್ದಾರೆ.
“ನನ್ನನ್ನು ದೈಹಿಕವಾಗಿ ನೋಯಿಸುವ ಸಂಚಿನಲ್ಲಿ ಅವನು ಭಾಗಿಯಾಗಿದ್ದ. ಅವನೊಬ್ಬ ಕ್ರಿಮಿನಲ್, ಅವನು ರಾಜಕೀಯ ಕಾರಣಗಳಿಂದ ವಿಸಿ ಸ್ಥಾನದಲ್ಲಿ ಕುಳಿತಿದ್ದಾನೆ. ನನ್ನನ್ನು ಆತ ಅಲ್ಲಿಗೆ ಆಹ್ವಾನಿಸಿದ್ದ. ನನ್ನ ಮೇಲೆ ದಾಳಿಯಾದಾಗ ಅವರ ಕರ್ತವ್ಯ ಏನು? ಅವರು ಪೊಲೀಸರಿಗೆ ವರದಿ ಮಾಡಬೇಕಾಗಿತ್ತಲ್ಲ ಪೊಲೀಸರಿಗೆ, ಆದರೆ ಅವರು ಹಾಗೆ ಮಾಡಲಿಲ್ಲ,” ಎಂದು ಖಾನ್ ದೆಹಲಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ವೇದಿಕೆಯಲ್ಲಿ ನಡೆದ ಘಟನೆಯ ಬಗ್ಗೆ ಪೊಲೀಸರಿಗೆ ವರದಿ ಕಳುಹಿಸುವಂತೆ ರಾಜಭವನ ವಿಸಿಗೆ ಕೇಳಿತ್ತು. ಆದರೆ ಆತ ವರದಿ ಮಾತ್ರ  ಕಳುಹಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಒಬ್ಬ ವಿಸಿಯ ವಿರುದ್ಧ ಆರೋಪ ಮಾಡುವುದರಲ್ಲಿ ಕಲಾಹರಣವನನ್ನು ನಾನು ಬಯಸುವುದಿಲ್ಲ. ಆತನ ಬಗ್ಗೆ ಕ್ರಮ ಜರುಗಿಸುವ ಶಕ್ತಿ ನನಗೆ ಇದೆ. ಈ ಬಗ್ಗೆ ನಾನೇಕೆ ಸಾರ್ವಜನಿಕವಾಗಿ ಮಾತನಾಡುತ್ತಿದ್ದೇನೆಂದರೆ, ಈ ವಿಸಿ ಸಭ್ಯತೆ, ಶೈಕ್ಷಣಿಕ ಶಿಸ್ತಿನ ಎಲ್ಲ ಮಿತಿಗಳನ್ನು ದಾಟಿದ್ದಾನೆ. ಅವರು ಕಣ್ಣೂರು ವಿಶ್ವವಿದ್ಯಾಲಯವನ್ನು ಹಾಳುಮಾಡಿದ್ದಾರೆ, ಅತ ವಿಸಿಗಿಂತ ಹೆಚ್ಚಾಗಿ, ಅವರು ಸಿಪಿಐಎಂನ ರಾಜಕೀಯ ಮನುಷ್ಯ … ಹಲ್ಲೆಯ ಸಂಚಿನ ಹಿಂದೆ ಇದ್ದವ ಎಂದು ಖಾನ್ ಆರೋಪಿಸಿದ್ದಾರೆ.
ರಾಜ್ಯಪಾಲರ ಆರೋಪಕ್ಕೆ ಕಣ್ಣೂರು ವಿಶ್ವ ವಿದ್ಯಾಲಯದ ವಿಸಿ ಗೋಪಿನಾಥ್ ರವೀಂದ್ರನ್ ರಿಂದ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯಸಭಾ ಮಾಜಿ ಸಂಸದ ಕೆ.ಕೆ.ರಾಗೇಶ್ ಅವರ ಪತ್ನಿ ಪ್ರಿಯಾ ವರ್ಗೀಸ್ ಅವರನ್ನು ಮಲಯಾಳಂ ಅಸೋಸಿಯೇಟ್ ಪ್ರೊಫೆಸರ್ ಆಗಿ ನೇಮಿಸುವ ಕಣ್ಣೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನೇಮಿಸುವ ವಿಚಾರವಾಗಿ ರಾಜ್ಯಪಾಲ ಆರೀಫ್‌ ಖಾನ್‌ ಹಾಗೂ ಮತ್ತು ಆಡಳಿತಾರೂಢ ಸಿಪಿಐ(ಎಂ) ನಡುವಿನ ಜಗಳ ಮತ್ತಷ್ಟು ಉಲ್ಬಣಗೊಂಡ ನಂತರ ಖಾನ್ ರಿಂದ ಈ ಸ್ಫೊಟಕ ಹೇಳಿಕೆಗಳು ಹೊರಬಿದ್ದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!