ಅರುಣಾಚಲ ಪ್ರದೇಶಕ್ಕೆ ಅಮಿತ್ ಶಾ ಭೇಟಿ: ಚೀನಾ ಗರಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇಂದ್ರ ಗೃಹ ಸಚಿವ ಅಮಿತ್ ಶಾ ಅರುಣಾಚಲ ಪ್ರದೇಶ ಭೇಟಿಯನ್ನು ಚೀನಾ ತೀವ್ರವಾಗಿ ವಿರೋಧಿಸಿದೆ.ಇಲ್ಲಿನ ಅಧಿಕೃತ ಚಟುವಟಿಕೆಗಳು ಚೀನಾದ ಸಾರ್ವಭೌಮತ್ವಕ್ಕೆ ಧಕ್ಕೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಅರುಣಾಚಲ ಪ್ರದೇಶದಲ್ಲಿನ ಕೆಲವೊಂದು ಸ್ಥಳಗಳ ಹೆಸರನ್ನು ಚೀನಾ ಬದಲಿಸಿದ್ದು, ಈ ಪ್ರದೇಶ ತನ್ನ “ಸಾರ್ವಭೌಮತ್ವ” ಎಂದು ಹೇಳಿಕೊಂಡಿದೆ. ಈ ಮಧ್ಯೆ ಅರುಣಾಚಲ ಪ್ರದೇಶಕ್ಕೆ ಇಂದಿನಿಂದ ಎರಡು ದಿನ ಭೇಟಿ ನೀಡಿರುವ ಅಮಿತ್ ಶಾ, ಕಿಬಿತೊ ಗ್ರಾಮದಲ್ಲಿ 9 ಮಿನಿ ಜಲ ವಿದ್ಯುತ್ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂಜ್ವಾ ಜಿಲ್ಲೆಯ ಕಿಬಿತೋದಲ್ಲಿ ಐಟಿಬಿಪಿ ಸಿಬ್ಬಂದಿಯೊಂದಿಗೆ ಶಾ ಸಂವಾದ ನಡೆಸಲಿದ್ದು, ಮಂಗಳವಾರ ವಲಾಂಗ್ ಹುತಾತ್ಮರ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!