ಅನಿತಾ ಭಟ್ ಸಹೋದರ ನಿಧನ: ಭಾವುಕ ಪೋಸ್ಟ್‌ ಹಂಚಿಕೊಂಡ ನಟಿ ಸ್ಯಾಂಡಲ್ ವುಡ್ ನಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಸೈಕೋ, ಕನ್ನೇರಿ, ಬೆಂಗಳೂರು 69 ಸಿನಿಮಾ ನಟಿ ಅನಿತಾ ಭಟ್ (Anita Bhat) ಅವರ ಸಹೋದರ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.

ಈ ಕುರಿತು ನಟಿ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.ಸಹೋದರನ ಅಗಲಿಕೆಯಿಂದಾಗಿ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ.
‘ನನ್ನ ಸಹೋದರ ಹೃದಯ ಸ್ತಂಭನದಿಂದ ನಮ್ಮನ್ನು ಅಗಲಿದ್ದಾರೆ. ನಾವು ಅನುಭವಿಸುತ್ತಿರುವ ನೋವನ್ನು ಹೇಳಲು ಯಾವುದೇ ಪದಗಳಿಲ್ಲ. ನಾವು ಒಪ್ಪಿಕೊಳ್ಳಬೇಕಾದ ಕಹಿ ಸತ್ಯವೆಂದರೆ ಅವನು ಮತ್ತೆ ಹಿಂತಿರುಗುವುದಿಲ್ಲ. ಆತನಿಗೆ ಸದ್ಗತಿ ಸಿಗುವಂತೆ ಅನುಗ್ರಹಿಸಿ. ಈಗ ನಿಮ್ಮ ಆಶೀರ್ವಾದ ಬೇಕು’ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ನಟಿ ಸಹೋದರನ ಜತೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ.

ಅನಿತಾ ಭಟ್​ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜತೆಗೆ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ನಲ್ಲೂ ಕೂಡ ಭಾಗವಹಿಸಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!