ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಪ್ರಾಜೆಕ್ಟ್ ಟೈಗರ್’ ಗೆ 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದನ್ನು ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಶ್ಲಾಘಿಸಿದ್ದಾರೆ.
ಕಾಡು ಪ್ರಾಣಿಗಳ ರಕ್ಷಣೆಗಾಗಿ ನರೇಂದ್ರ ಮೋದಿ ಅವರ ಪ್ರಯತ್ನಗಳಿಗಾಗಿ ಅವರನ್ನು ‘ಐಕಾನಿಕ್’ ಮತ್ತು ‘ವಿಶ್ವ ನಾಯಕ’ ಎಂದು ಬಣ್ಣಿಸಿದ್ದಾರೆ ಪೀಟರ್ಸನ್ .
ಈ ಕುರಿತು ಟ್ವೀಟ್ ಮಾಡಿದ ಅವರು, ಐಕಾನಿಕ್! ಕಾಡು ಪ್ರಾಣಿಗಳನ್ನು ಪ್ರೀತಿಸುವ ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ಅವುಗಳೊಂದಿಗೆ ಸಮಯ ಕಳೆಯಲು ಉತ್ಸುಕರಾಗಿರುವ ವಿಶ್ವ ನಾಯಕ. ನೆನಪಿರಲಿ, ಅವರ ಕೊನೆಯ ಜನ್ಮದಿನದಂದು ಅವರು ಚೀತಾಗಳನ್ನು ಕಾಡಿಗೆ ಬಿಟ್ಟಿದ್ದರು.ಹೀರೋ! ನರೇಂದ್ರ ಮೋದಿ ಎಂದು ಬರೆದಿದ್ದಾರೆ.
ICONIC!
A world leader who adores wild animals and is so excited when spending time with them in their natural habitat. Remember, for his last birthday, he released cheetahs into the wild in India.
HERO, @narendramodi 🙏🏽 pic.twitter.com/D8EPDJh6Jc— Kevin Pietersen🦏 (@KP24) April 9, 2023