Saturday, October 1, 2022

Latest Posts

ಅಮೃತ ಸಮ್ಮಾನ ಗೌರವ : ವಿಶಾಲಾಕ್ಷಿ ದೇಶಪಾಂಡೆಗೆ ಮರಣೋತ್ತರ ಪ್ರಶಸ್ತಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಕಚುಸಾಪ ದಶಮಾನೋತ್ಸವ ಸಂಭ್ರಮ ಅಂಗವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ನಾಲ್ವರಲ್ಲಿ ಇಬ್ಬರಿಗೆ
” ಅಮೃತ ಸಮ್ಮಾನ ಗೌರವ” ಹಾಗೂ ಇಬ್ಬರಿಗೆ ” ಚುಟುಕು ಚೇತನ ” ಗೌರವ ಪ್ರಶಸ್ತಿ ನೀಡಿ ಗೌರವಿಸುವುದಾಗಿ ಕಚುಸಾಪ‌ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.

ಸೆಪ್ಟೆಂಬರ್ 18 ರವಿವಾರ ಧಾರವಾಡ ವಿದ್ಯಾವರ್ಧಕ ಸಂಘದಲ್ಲಿ ಬೆಳಿಗ್ಗೆ 10-30 ಕ್ಕೆ ಜರುಗುವ ಅಖಂಡ ಧಾರವಾಡ ಜಿಲ್ಲಾಮಟ್ಟದ ಹತ್ತನೇ ಸಮ್ಮೇಳನದಲ್ಲಿ ಗದಗ ಜಿಲ್ಲೆ ಶಿರಹಟ್ಟಿಯ ಹಿರಿಯ ಲೇಖಕಿ ಪ್ರೊ. ವಿಶಾಲಾಕ್ಷಿ ದೇಶಪಾಂಡೆ ಅವರಿಗೆ ಮರಣೋತ್ತರವಾಗಿ ಮತ್ತು ಸಮ್ಮೇಳನದ ಸರ್ವಾಧ್ಯಕ್ಷರಾದ ಮಂಜುಳಾ ನಾಮದೇವ ಅವರಿಗೆ ” ಅಮೃತ ಸಮ್ಮಾನ ಗೌರವ” ಇನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ಸಾಹಿತಿ, ನ್ಯಾಯವಾದಿ ಎಚ್.ಪಿ.ಕಲ್ಲಂಭಟ್ಟ, ಹಾವೇರಿ ಜಿಲ್ಲೆಯ ಕೋಣನತಂಬಗಿಯ ಯುವ ಬರಹಗಾರ ಡಾ.ಗಂಗಯ್ಯ ಕುಲಕರ್ಣಿ ಅವರಿಗೆ ” ಚುಟುಕು ಚೇತನ ” ಪ್ರಶಸ್ತಿಗೆ ಅಯ್ಕೆ ಮಾಡಲಾಗಿದೆ ಎಂದು ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!