Wednesday, October 5, 2022

Latest Posts

ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಲ್ಲೇ ಹಣ ಲಪಟಾಯಿಸಿ ಪರಾರಿಯಾದ ಮ್ಯಾನೇಜರ್

ಹೊಸದಿಗಂತ ವರದಿ ಯಲ್ಲಾಪುರ :

ಪಟ್ಟಣದ ಚವಾಣ್ ಕಾಂಪ್ಲೆಕ್ಸ್ ನಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಶಾಖೆಯ ಅಸಿಸ್ಟೆಂಟ್ ಮ್ಯಾನೇಜರ್ 2,69,95000 ರೂ ಗಳನ್ನು ಲಪಟಾಯಿಸಿ ಬ್ಯಾಂಕಿಗೆ ಮಂಕು ಬೂದಿ ಎರಚಿರುವ ಕುರಿತು ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ. ಆಂಧ್ರಪ್ರದೇಶ ದ ಅನಂತ ಪುರ ಜಿಲ್ಲೆಯ ಸಿಂಡಿಕೆಟ್ ನಗರ ನಿವಾಸಿ ಕುಮಾರ ಕೃಷ್ಣ ಮೂರ್ತಿ ಬೋನಾಲ ಹಣ ಲಪಟಾಯಿಸಿದ ಆರೋಪಿ.

ಅನಂತಪುರ ಮೂಲದ ಕುಮಾರ ಕೃಷ್ಣಮೂರ್ತಿ

ಈತ 2022 ರ ಏಪ್ರಿಲ್ ನಿಂದ ಸೆ. 5 ರ ನಡುವಿನ ಅವಧಿಯಲ್ಲಿ ಬ್ಯಾಂಕ್ ಆಫ್ ಬರೋಡಾ ಶಾಖೆಯು ಎಸ್ ಬಿಐನಲ್ಲಿ ಹೊಂದಿರುವ ಕರೆಂಟ್ ಅಕೌಂಟ್ ಖಾತೆಯ ಮೂಲಕ 2,69,95000 ರೂ.ಗಳನ್ನು ತನ್ನ ಪತ್ನಿ ರೇವತಿ ಪ್ರಿಯಾಂಕ ಗೊರ್ರೆ ಯ ಆಂಧ್ರ ಪ್ರದೇಶದ ಚಿರಲಾದ ಎಸ್ ಬಿ ಆಯ್ ಬ್ಯಾಂಕ್ ನಲ್ಲಿ ಹೊಂದಿರುವ ಖಾತೆ ಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದ ಎಂದು ತಿಳಿದುಬಂದಿದೆ .
ಹೀಗೆ ಹಣ ವರ್ಗಾವಣೆ ಮಾಡಲು ಈತ ಯಲ್ಲಾಪುರ ಬ್ಯಾಂಕ್‌ ಆಫ್ ಬರೋಡಾದ ಸಿಬ್ಬಂದಿಯಾದ ಸಂಜೀವ ಭಟ್ ಮತ್ತು ನಾಗೇಂದ್ರ ಎಂಬುವವರ ಲಾಗ್ ಇನ್ ಅನ್ನು ಅವರ ಗಮನಕ್ಕೆ ಬರದಂತೆ ಬಳಸಿಕೊಂಡಿದ್ದ. ಈ ಕುರಿತು ಬ್ಯಾಂಕ ಆಫ್ ಬರೋಡಾದ ಯಲ್ಲಾಪುರ ಶಾಖೆಯ ವ್ಯವಸ್ಥಾಪಕ ವಿಘ್ನಣೆಶ್ವರ್ ಭಟ್ ಯಲ್ಲಾಪುರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!