ಅಮೃತಯಾತ್ರೆ: ದೇಶದ ಮೂಲೆ ಮೂಲೆಗೂ ತಲುಪಿದೆ ಬ್ಯಾಂಕಿಂಗ್‌ ವ್ಯವಸ್ಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶವು ಸ್ವಾತಂತ್ರ್ಯಗೊಂಡು 75 ವರ್ಷಗಳು ಕಳೆದಿವೆ. ಸುದೀರ್ಘ ಪಯಣದಲ್ಲಿ ದೇಶದ ಅಭಿವೃದ್ಧಿಗೆ ಒತ್ತುಕೊಟ್ಟು ಅನೇಕ ಕಾರ್ಯಗಳು ನಡೆಯುತ್ತಿವೆ. ಅಂತಹವುಗಳಲ್ಲಿ ಅಮೃತಮಹೋತ್ಸವದ ಹೊತ್ತಿಗೆ ದೇಶದ ಮೂಲೆ ಮೂಲೆಗಳಿಗೂ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ತಲುಪಿಸಿದ್ದು ಕೂಡ ಒಂದು. ಇಂದು ಗ್ರಾಮೀಣ ಪ್ರದೇಶಗಳನ್ನೂ ಒಳಗೊಂಡಂತೆ ದೇಶದ ಪ್ರತಿ ಮೂಲೆ ಮೂಲೆಗೂ ಬ್ಯಾಂಕ್‌ ಸ್ಥಾಪಿಸಲಾಗಿದೆ. ಆಮೂಲಕ ದೇಶದ ಜನರನ್ನು ಹಣಕಾಸಿನ ಸಾಕ್ಷರತೆಯೆಡೆಗೆ ಕೊಂಡೊಯ್ಯಲಾಗುತ್ತಿದೆ.

ಭಾರತದ ವಿಸ್ತಾರವಾದ ಭೂ ಪ್ರದೇಶದಲ್ಲಿ ವಾಸಿಸುವ ದೇಶವಾಸಿಗಳಿಗೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಅತ್ಯಂತ ಅಗತ್ಯವಿರುವ ಬ್ಯಾಂಕಿಂಗ್‌ ವ್ಯವಸ್ಥೆ ದೇಶದಲ್ಲಿ ಸರಿಯಾಗಿರಲಿಲ್ಲ. ಬ್ಯಾಂಕ್‌ ಎಂದರೆ ಅದು ಕೇವಲ ಹಣವಂತರು ಹೋಗೋ ಸ್ಥಳ ಎಂಬಂತಾಗಿಬಿಟ್ಟಿತ್ತು. ಅನೇಕರಿಗೆ ಬ್ಯಾಂಕ್‌ ಎಂದರೇನು ಎಂಬುದೇ ತಿಳಿದಿರಲಿಲ್ಲ. ಇನ್ನು ಹಣಕಾಸು ಸಾಕ್ಷರತೆಯಂತೂ ಅತ್ಯಂತ ಕನಿಷ್ಟ ಪ್ರಮಾಣದಲ್ಲಿತ್ತು. ಆದರೆ ಸರ್ಕಾರವು ಈ ವ್ಯವಸ್ಥೆಯನ್ನು ಸರಿಪಡಿಸಲು ಅನೇಕ ಕ್ರಮ ಕೈಗೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್‌ ಗಳ ಸ್ಥಾಪನೆಗೆ ಒತ್ತು ನೀಡಿ ದೇಶದ ಮೂಲೆ ಮೂಲೆಗೂ ಬ್ಯಾಂಕ್‌ ವ್ಯವಸ್ಥೆ ಸ್ಥಾಪಿಸಲಾಗಿದೆ. 1981ರ ಸಮಯದಲ್ಲಿ ದೇಶದಲ್ಲಿ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‌ ಗಳ ಶಾಖೆಗಳ ಸಂಖ್ಯೆ ಕೇವಲ 35,707 ದಷ್ಟಿತ್ತು. ಈ ಸಂಖ್ಯೆ ಏರಿಕೆಯಾಗಿ 2021ರ ಹೊತ್ತಿಗೆ 1,50,63 ಬ್ಯಾಂಕ್ ಶಾಖೆಗಳು ದೇಶದ ಉದ್ದಗಲಕ್ಕೂ ಸ್ಥಾಪಿತವಾಗಿದೆ. ಕಳೆದೊಂದು ದಶಕದಲ್ಲಿಯೇ ವಾಣಿಜ್ಯ ಬ್ಯಾಂಕುಗಳ 60ಸಾವಿರಕ್ಕೂ ಅಧಿಕ ಬ್ಯಾಂಕ್‌ ಶಾಖೆಗಳು ತೆರೆಯಲ್ಪಟ್ಟಿವೆ.‌ 2014ರಲ್ಲಿ ಜಾರಿಗೆ ಬಂದ ಪ್ರಧಾನಮಂತ್ರಿ ಜನಧನ ಯೋಜನೆ ಮೂಲಕ ಪ್ರತಿನಾಗರಿಕನೂ ಬ್ಯಾಂಕಿನ ವ್ಯವಹಾರ ಮಾಡಲು ಉತ್ತೇಜನ ನೀಡಲಾಗಿದೆ. ಸರ್ಕಾರಿ ಧನಸಹಾಯಗಳು ಬ್ಯಾಂಕ್‌ ಮುಖಾಂತರ ನೇರವಾಗಿ ಫಲಾನುಭವಿಗೆ ತಲುಪುವಂತೆ ಮಾಡಿರುವುದೂ ಕೂಡ ಈ ನಿಟ್ಟಿನಲ್ಲಿ ಪ್ರಮುಖ ಬೆಳವಣಿಗೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!