ಅಮೃತಯಾತ್ರೆ: ಗರ್ಭಿಣಿಯರ ಆರೋಗ್ಯಕ್ಕೆ ಒತ್ತು, ತಾಯಿಮರಣ ಪ್ರಮಾಣ ಕುಸಿದಿದ್ದು ಹೀಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಹೊತ್ತಿಗೆ ದೇಶದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಸಾಕಷ್ಟಿವೆ. ಜನಸಾಮಾನ್ಯರ ಆರೋಗ್ಯ ಸುಧಾರಣೆಗಾಗಿ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಸರ್ಕಾರಿ ಆಸ್ಪತ್ರೆಗಳ ಸ್ಥಾಪನೆ, ಆರೋಗ್ಯ ಮೂಲಭೂತ ಸೌಕರ್ಯ ಹೆಚ್ಚಿಸುವ ಮೂಲಕ ಅನೇಕ ಕ್ರಮ ಕೈಗೊಳ್ಳಲಾಗಿದೆ. ಅವುಗಳಲ್ಲಿ ಗರ್ಭಿಣಿ ಸ್ತ್ರೀಯರ ಆರೋಗ್ಯದ ಕುರಿತು ಕಾಳಜಿ ವಹಿಸಿರುವುದೂ ಕೂಡ ಒಂದು. ಹೆರಿಗೆ ಆಸ್ಪತ್ರೆಗಳ ಸೌಲಭ್ಯ ಹೆಚ್ಚಿಸುವುದರೊಂದಿಗೆ ಸ್ತ್ರೀಯರು ಗರ್ಭಿಣಿಯರಾಗಿದ್ದಾಗಿನಿಂದಲೇ ಅವರ ಆರೋಗ್ಯವನ್ನು ಕಾಪಾಡುವತ್ತಲೂ ಹೆಚ್ಚಿನ ಗಮನ ವಹಿಸಲಾಗಿದೆ.

ಗರ್ಭಿಣಿ ಸ್ತ್ರೀಯರಿಗೆ ಅಗತ್ಯ ಪೋಷಕಾಂಶಗಳ ವಿತರಣೆ, ಅಂಗನವಾಡಿಗಳ ಮೂಲಕ ಅವರಿಗೆ ಅಗತ್ಯ ಆರೋಗ್ಯಯುತ ಆಹಾರವಸ್ತುಗಳ ಪೂರೈಕೆ ಇತ್ಯಾದಿಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಪರಿಣಾಮ ತಾಯಿ ಮರಣ ಅನುಪಾತದಲ್ಲಿ ಗಣನೀಯ ಕುಸಿತವಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ 1992-93ರ ಸಮಯದಲ್ಲಿ ಒಂದು ಲಕ್ಷ ಗರ್ಭಿಣಿಯರಲ್ಲಿ 437ರಷ್ಟು ಮಹಿಳೆಯರು ಸಾವನ್ನಪ್ಪುತ್ತಿದ್ದರು. ಈ ಪ್ರಮಾಣದಲ್ಲಿ ಗಣನೀಯ ಕುಸಿತವಾಗಿದೆ. 2018-20ರ ನಡುವೆ ತಾಯಿ ಮರಣ ಪ್ರಮಾಣವು ಒಂದು ಲಕ್ಷಕ್ಕೆ 97ರಷ್ಟಾಗಿದೆ. ಇದರಲ್ಲಿ ಶೂನ್ಯ ಗುರಿ ಸಾಧಿಸುವತ್ತ ಸರ್ಕಾರ ಕ್ರಮ ವಹಿಸುತ್ತಿದೆ. ಪ್ರಧಾನ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ, ಪ್ರಧಾನ ಮಂತ್ರಿ
ಮಾತೃ ವಂದನಾ ಯೋಜನೆ ಇತ್ಯಾದಿಗಳ ಮೂಲಕ ತಾಯಂದಿರ ಆರೋಗ್ಯ ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!