ಅಮೃತಯಾತ್ರೆ: ಭಾರತದಲ್ಲಿ ಹೆಚ್ಚಿದ ಹುಲಿಗಳ ಘರ್ಜನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೃತಯಾತ್ರೆಯ ಹೊತ್ತಿನಲ್ಲಿ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಗಳ ಸಂತತಿಯನ್ನು ಜತನದಿಂದ ಕಾಪಾಡಿದ್ದಲ್ಲದೇ ವರ್ಷದಿಂದ ವರ್ಷಕ್ಕೆ ಅವುಗಳ ಸಂಖ್ಯೆಯೂ ಹೆಚ್ಚುತ್ತಿರುವುದು ಹೆಮ್ಮೆಯ ಸಂಗತಿ.

ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿ ಬ್ರಿಟೀಷರ ಬೇಟೆ ಹುಚ್ಚಿಗೆ ಸಿಕ್ಕು ಅದೆಷ್ಟೋ ಹುಲಿಗಳನ್ನು ಕಳೆದುಕೊಂಡು ಹುಲಿಗಳ ಸಂಖ್ಯೆ ಅಳಿವಿನ ಅಂಚಿನಲ್ಲಿತ್ತು. ಆದರೆ ನಂತರದಲ್ಲಿ ಅವುಗಳನ್ನು ಕಾಪಾಡುವ ಕುರಿತು ಶ್ರಮ ವಹಿಸಲಾಯಿತು. ಅವುಗಳನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಿ ಅವುಗಳಿಗೆಂದೇ ವಿಶೇಷ ಉದ್ಯಾನವನವನ್ನು ನಿರ್ಮಿಸಿ ಅವುಗಳನ್ನು ಸಂರಕ್ಷಿಸಲಾಯಿತು.

ಜಗತ್ತಿನಲ್ಲಿರುವ ಹುಲಿಗಳ ಪೈಕಿ 70 ಶೇಕಡಾದಷ್ಟು ಹುಲಿಗಳಿಗೆ ಭಾರತವೇ ಆವಾಸಸ್ಥಾನ. ಹುಲಿಗಳು ಸ್ವಚ್ಛಂಧವಾಗಿ ಬದುಕಲು ಭಾರತದ ಪರಿಸರದಷ್ಟು ಪೂರಕವಾದ ಇನ್ನೊಂದ ಪರಿಸರ ಜಗತ್ತಿನ ಉಳಿದೆಲ್ಲೂ ಇಲ್ಲ. ಬಾಂಗ್ಲಾದೇಶ, ಮ್ಯಾನ್ಮಾರ್‌ ಹೀಗೆ ದಕ್ಷಿಣ ಏಷ್ಯಾದ ಇತರ ಕೆಲ ಪ್ರದೇಶಗಳಲ್ಲಿ ಹುಲಿಗಳು ಕಾಣಸಿಗುತ್ತವೆಯಾದರೂ ಭಾರತದಲ್ಲಿ ಹುಲಿಗಳಿಗಿರುವ ಮನ್ನಣೆ ಇನ್ನೆಲ್ಲೂ ಇಲ್ಲ.

ಭಾರತದ ಸುಂದರ್‌ ಬನ್‌ ಕಾಡುಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಿದೆ. ಕರ್ನಾಟಕದಲ್ಲೂ ಬಂಡಿಪುರ ಉದ್ಯಾನ, ನಾಗರಹೊಳೆಗಳಲ್ಲಿ ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ಭಾರತದಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಉಳಿದ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ. 2006 ರಿಂದ 2018ರ ನಡುವೆ ಹುಲಿಗಳ ಸಂತತಿಯಲ್ಲಿ ಭಾರೀ ಏರಿಕೆಯಾಗಿದ್ದು ಹೆಚ್ಚುಕಡಿಮೆ ಎರಡುಪಟ್ಟು ಹೆಚ್ಚಿದೆ.

ಹುಲಿಗಳ ಪ್ರಭೇದದಲ್ಲಿ ಭಾರತ ʼಬೆಂಗಾಲ್‌ ಟೈಗರ್‌ʼ ಎಲ್ಲಕ್ಕಿಂತ ಹೆಚ್ಚು ಕ್ರೂರ, ಶಕ್ತಿಶಾಲಿ ಮತ್ತು ಗಾತ್ರದಲ್ಲಿಯೂ ದೊಡ್ಡದು ಎಂದು ಹೇಳಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!