ಅಮೃತಯಾತ್ರೆ: ಮೀನುಗಾರಿಕೆಯಲ್ಲಿ ಜಾಗತಿಕವಾಗಿ ಎರಡನೇ ಸ್ಥಾನಕ್ಕೇರಿದೆ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೃತಯಾತ್ರೆಯ ಹೊತ್ತಲ್ಲಿ ಹೇಳಿಕೊಳ್ಳಬಹುದಾದ ಸಾಧನೆಗಳಲ್ಲಿ ಮೀನುಗಾರಿಕೆಯಲ್ಲಿ ಹೆಚ್ಚಳ ಸಾಧಿಸಿರುವ ಕಥೆಯೂ ಒಂದು. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ವರ್ಷದಿಂದ ವರ್ಷಕ್ಕೆ ಮಿನುಗಾರಿಕೆಯಲ್ಲಿ ಅಭಿವೃದ್ಧಿ ಸಾಧಿಸಲಾಗಿದೆ.

2021-22ನೇ ಆರ್ಥಿಕ ವರ್ಷದಲ್ಲಿ ದಾಖಲೆಯ 161.87 ಲಕ್ಷಟನ್‌ ಮತ್ಸ್ಯೋತ್ಪನ್ನಗಳ ಸಂಗ್ರಹಣೆಯಾಗಿದೆ. 1950ರ ಹೊತ್ತಿಗೆ 7.52 ಲಕ್ಷಟನ್‌ ಗಳಷ್ಟಿದ್ದ ಮತ್ಸ್ಯ ಉತ್ಪಾದನೆಯು 2010ರ ಹೊತ್ತಿಗೆ 84 ಲಕ್ಷ ಟನ್‌ ಗಳಷ್ಟು ಉತ್ಪಾದನೆ ಸಾಧಿತವಾಗಿತ್ತು. ವರ್ಷದಿಂದ ವರ್ಷಕ್ಕೆ ಈ ಉತ್ಪಾದನೆ ಏರುಗತಿಯಲ್ಲೇ ಸಾಗಿದೆ.

ಸುಮಾರು 28 ಮಿಲಿಯನ್‌ ಕುಟುಂಬಗಳ ಜೀವನಾಧಾರವಾದ ಮೀನುಗಾರಿಕೆ ವಿಷಯದಲ್ಲಿ ಭಾರತವು ಪ್ರಸ್ತುತ ಜಗತ್ತಿನಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಮೀನುಗಾರಿಕೆಯನ್ನು ಉತ್ತೇಜಿಸಲೆಂದೇ 2020ರಲ್ಲಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯನ್ನು ಜಾರಿ ಮಾಡುವ ಮೂಲಕ ಮೀನು ಉತ್ಪಾದನೆಯನ್ನು ಹೆಚ್ಚಿಸಿ, ಮೌಲ್ಯ ಸರಪಳಿಯನ್ನು ಬಲಪಡಿಸಲು ಎಲ್ಲ ಪ್ರಯತ್ನಗಳೂ ನಡೆದಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!