ಬ್ರಿಟಿಷ್ ಸಂಪ್ರದಾಯಕ್ಕೆ ಸವಾಲೆಸೆದು ಆಧುನಿಕ ಸೀರೆ ಕುಪ್ಪಸ ತಯಾರಿಸಿದ್ದ ಕೊಲ್ಕತ್ತಾದ ಮಹಿಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಕಲ್ಕತ್ತಾದ ಮಹಿಳೆಯೊಬ್ಬರು ಬ್ರಿಟಿಷ್ ಸಂಪ್ರದಾಯಕ್ಕೆ ಸವಾಲು ಹಾಕಿ ಆಧುನಿಕ ಸೀರೆ ಕುಪ್ಪಸ ಪರಿಚಯಿಸಿದ ಬಗೆಯೇ ಬಹಳ ರೋಮಾಂಚನಕಾರಿಯಾಗಿದೆ. ಪ್ರಾಚೀನ ಭಾರತೀಯ ಮಹಿಳೆಯರು ಸಾಮಾನ್ಯವಾಗಿ ಮೇಲಿನ ಒಳ ಉಡುಪು(ಕುಪ್ಪಸ) ಇಲ್ಲದೆ ಸೀರೆಗಳನ್ನು ಧರಿಸುತ್ತಿದ್ದ ಸಂಗತಿ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ನಮ್ಮ ಭಾರತೀಯ ಮಹಿಳೆಯರೂ ಕೂಡಾ ಕುಪ್ಪಸ ಧರಿಸುವ ಸಮಯ ಪ್ರಾರಂಭವಾಗಿದ್ದೇ ಬ್ರಿಟಿಷರ ಕಾಲದಲ್ಲಿ.

ಪುರಾತನ ಭಾರತದಲ್ಲಿ, ಮಹಿಳೆಯರು ಕುಪ್ಪಸವಿಲ್ಲದೆ ವಸ್ತ್ರವನ್ನು ಧರಿಸುತ್ತಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ದೇಶದಾದ್ಯಂತ ಇರುವ ದೇವಾಲಯಗಳು ಮತ್ತು ಕೋಟೆಗಳಲ್ಲಿ ಆ ಕಾಲದ ಡ್ರೆಸ್ಸಿಂಗ್ ಶೈಲಿಯನ್ನು ಪ್ರತಿಬಿಂಬಿಸುವ ಶಿಲ್ಪಗಳಿವೆ ಅಲ್ಲಿ ಸೀರೆ ಕುಪ್ಪಸವು ಎಲ್ಲಿಯೂ ಕಾಣಿಸುವುದಿಲ್ಲ. ಈಗಿನ ಡಿಸೈನ್‌ ಡಿಸೈನ್‌ ಕುಪ್ಪಸ ಅಲ್ಲದಿದ್ದರೂ ಮೇಲಿನ ವಸ್ತ್ರ ಪರಿಚಯಿಸಿದ್ದು ಮಾತ್ರ ಟ್ಯಾಗೋರ್ ಕುಟುಂಬದ ಜ್ಞಾನದಾನಂದಿನಿ ದೇಬಿ. ಮಹಿಳಾ ಹಕ್ಕುಗಳ ಪ್ರತಿಪಾದಕಿ ಮತ್ತು ಉದಾರವಾದದಲ್ಲಿ ನಂಬಿಕೆಯುಳ್ಳ ಜ್ಞಾನದಾನಂದಿನಿ ದೇಬಿ ಆಧುನಿಕ ಕಾಲದ ಸೀರೆಯನ್ನು ಜನಪ್ರಿಯಗೊಳಿಸಿದ ಮಹಿಳೆಯಾಗಿ ಇತಿಹಾಸದ ಪುಟದಲ್ಲಿ ಸೇರಿದ್ದಾರೆ.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಜ್ಞಾನದಾನಂದಿನಿ ದೇಬಿ ಏಳನೇ ವಯಸ್ಸಿನಲ್ಲಿ ಪ್ರತಿಷ್ಠಿತ ಟ್ಯಾಗೋರ್ ಕುಟುಂಬಕ್ಕೆ ಸೊಸೆಯಾಗಿ ಹೋಗುತ್ತಾರೆ. ಟ್ಯಾಗೋರ್ ಕುಟುಂಬದಲ್ಲಿ ಮದುವೆಯಾಗುವುದು ಎಂದರೆ ಬಂಗಾಳದಲ್ಲಿ ಮಹಿಳೆಯರು ಅನುಸರಿಸಬೇಕಾದ ಕಠಿಣ ನಿಯಮಗಳಿಗೆ ಬದ್ಧವಾಗಿರುವುದು. ಮಹಿಳೆಯರು ಅನುಸರಿಸಬೇಕಾದ ಡ್ರೆಸ್ಸಿಂಗ್ ಶೈಲಿಗೂ ಈ ವ್ಯವಸ್ಥೆ ವಿಸ್ತರಿಸಿತು.

ಸತ್ಯೇಂದ್ರನಾಥನು ತನ್ನ ಹೆಂಡತಿಯನ್ನು ಬೆಂಬಲಿಸುತ್ತಿದ್ದರೂ ಮತ್ತು ಮಹಿಳಾ ಹಕ್ಕುಗಳಿಗಾಗಿ ಪ್ರತಿಪಾದಿಸಿದರೂ, ಕೌಟುಂಬಿಕ ನಿಯಮಗಳು ಜ್ಞಾನದಾನಂದಿನಿಯವರಿಗೆ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಾಗಲಿಲ್ಲ. ಮನೆಯವರ ವಿರೋಧದ ನಡುವೆಯೂ ಜ್ಞಾನದಾನಂದಿನಿ ತನ್ನ ಪತಿ ಮತ್ತು ಮಕ್ಕಳೊಂದಿಗೆ ಪ್ರತ್ಯೇಕ ಮನೆಗೆ ತೆರಳಿದರು. ಇದು ಕಲ್ಕತ್ತಾದಲ್ಲಿ ವಿಭಕ್ತ ಕುಟುಂಬಗಳನ್ನು ಪರಿಚಯಿಸಿತು.

ಇದಾದ ಬಳಿಕ ಜ್ಞಾನದಾನಂದಿನಿ ಹೆಚ್ಚಾಗಿ ಮನೆಯಿಂದ ಹೊರಬರಲು ಪ್ರಾರಂಭಿಸಿ ಮಹಿಳೆಯರ ಪರವಾಗಿ ಧ್ವನಿಯಾಗಿ ನಿಂತರು. ಈ ಕ್ರಮದಲ್ಲಿ ಒಮ್ಮೆ ಬಾಂಬೆಗೆ ಪ್ರಯಾಣಿಸಿದಾಗ ಅಲ್ಲಿ ನಡೆದ ಒಂದು ಘಟನೆ ಸೀರೆಯ ಕುಪ್ಪಸದ ಭವಿಷ್ಯವನ್ನು ರೂಪಿಸಿತು. ತನ್ನ ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಬ್ರಿಟಿಷರ ಆಳ್ವಿಕೆ ಅಡಿಯಲ್ಲಿದ್ದ ಕ್ಲಬ್‌ಗೆ ಜ್ಞಾನದಾನಂದಿನಿಯವರ ಪ್ರವೇಶ ನಿರಾಕರಿಸಲಾಯಿತು. ಕಾರಣ ಈಕೆ ಧರಿಸಿದ್ದ ಉಡುಪು. ಕೇವಲ ಎದೆಯ ಮೇಲೆ ಸೀರೆಯ ಬಟ್ಟೆ ಹಾಕಿದ್ದರಿಂದ ಆಕೆಯನ್ನು ಅಲ್ಲಿಂದ ಹೊರ ತಳ್ಳಿದರು ಇದನ್ನೇ ಸವಾಲಾಗಿ ಸ್ವೀಕರಿಸಿದ ಜ್ಞಾನದಾನಂದಿನಿಯು ತಲೆವರೆಗೆ ಮುಚ್ಚುವ ಮತ್ತು ನಾಜೂಕಾಗಿ ಸೀರೆಯನ್ನುಡುವ ವಿಧಾನವನ್ನು ಕಂಡುಕೊಂಡಳು. ತನ್ನ ದೇಹದ ಸುತ್ತ ಪಲ್ಲು ತಂದು ಎಡ ಭುಜದ ಮೇಲೆ ಹಾಕಿ ಸೀರೆ ಕಟ್ಟುವ ಗುಜರಾತಿ ಶೈಲಿಯನ್ನು ಅಳವಡಿಸಿಕೊಂಡಳು. ಅಲ್ಲಿಂದೀಚೆಗೆ, ಸಾಂಪ್ರದಾಯಿಕ ಉಡುಗೆಯಾಗಿ ಮಾತ್ರವಲ್ಲದೆ ಫ್ಯಾಷನ್ ಆಗಿಯೂ ಬಳಸಲಾಯಿತು.

ಕಲ್ಕತ್ತಾಗೆ ಹಿಂದಿರುಗಿದಾಗ, ಈ ಹೊಸ ಸೀರೆ ಉಡುವ ವಿಧಾನವನ್ನು ಕಲಿಯಲು ಮಹಿಳೆಯರನ್ನು ಆಹ್ವಾನಿಸಿದ ಕೂಡಲೇ ನೂರಾರು ಮಹಿಳೆಯರು ಆಕೆಯ ಮನೆ ಬಾಗಿಲಿಗೆ ಬಂದರು. ಈ ಶೈಲಿಯು ಶೀಘ್ರದಲ್ಲೇ ಬ್ರಾಹ್ಮಿಕಾ ಸೀರೆ ಎಂದು ಕರೆಯಲ್ಪಟ್ಟಿತು ಮತ್ತು ಕ್ರಮೇಣ ಕೆಮಿಸ್, ಜಾಕೆಟ್ ಮತ್ತು ಬ್ಲೌಸ್‌ಗಳಾಗಿ ರೂಪಾಂತರಗೊಂಡಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!