ಅಮೃತಯಾತ್ರೆ: ಹತ್ತೇ ವರ್ಷದಲ್ಲಿ ನೂರು ಶೇಕಡಾ ಹೆಚ್ಚಿದೆ ಭಾರತದ ರಾಸಾಯನಿಕ ಉತ್ಪನ್ನಗಳ ರಫ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರೋ ಹೊತ್ತಿಗೆ ಭಾರತದ ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳ ರಫ್ತಿನಲ್ಲಾದ ಹೆಚ್ಚಲದ ಬಗ್ಗೆಯೂ ನೀವು ತಿಳಿದುಕೊಳ್ಳಲೇಬೇಕು. ರಸಾಯನ ಶಾಸ್ತ್ರದಲ್ಲಿ ಭಾರತವು ಗಣನೀಯ ಪ್ರಗತಿ ಸಾಧಿಸಿದೆ. ನಮ್ಮ ಪ್ರಾಚೀನ ಗ್ರಂಥಗಳಲ್ಲಿ ರಾಸಾಯನಿಕಗಳ ರಚನೆಯ ಕುರಿತಾದ ಹಲವಾರು ವಿವರಣೆಗಳು ಲಭ್ಯವಿದೆ. ಭಾರತವಿಂದು ರಾಸಾಯನಿಕಗಳು ಹಾಗೂ ರಾಸಾಯನಿಕ ಉತ್ಪನ್ನಗಳನ್ನು ರಫ್ತುಮಾಡೋ ಜಗತ್ತಿನ ಅಗ್ರ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

1960-61 ರ ಸಮಯದಲ್ಲಿ ಕೇವಲ 7 ಕೋಟಿ ರೂಪಾಯಿ ಮೌಲ್ಯದ ರಾಸಾಯನಿಕಗಳನ್ನು ಭಾರತ ರಫ್ತು ಮಾಡಿತ್ತು. ಈ ಸಂಖ್ಯೆಯಲ್ಲಿ ಏರಿಕೆಯಾಗಿ 2010-11ರ ಸಮಯದಲ್ಲಿ 2,21,831 ಕೋಟಿ ರೂಪಾಯಿ ಮೌಲ್ಯದ ರಾಸಾಯನಿಕಗಳನ್ನು ರಫ್ತು ಮಾಡಿದೆ. ಮುಂದಿನ ಹತ್ತು ವರ್ಷಗಳಲ್ಲಿ ಈ ರಫ್ತಿನಲ್ಲಿ 100 ಶೇಕಡಾ ಹೆಚ್ಚಳ ಸಾಧಿಸಲಾಗಿದೆ. 2021-22 ರ ಹೊತ್ತಿಗೆ ಭಾರತದ ರಾಸಾಯನಿಕಗಳ ರಫ್ತು 4,98,691 ಕೋಟಿ ರೂಪಾಯಿಗಳ ಮೌಲ್ಯಕ್ಕೆ ತಲುಪಿದೆ. ಭಾರತವು ಜಗತ್ತಿನಲ್ಲಿಯೇ ಆರನೇ ಅತಿದೊಡ್ಡ ರಾಸಾಯನಿಕಗಳ ಉತ್ಪಾದಕನಾಗಿದ್ದರೆ ಏಷ್ಯಾದಲ್ಲಿ ಮೂರನೇ ಅತಿ ದೊಡ್ಡ ರಾಸಾಯನಿಕ ಉತ್ಪಾದಕನಾಗಿ ಹೊರಹೊಮ್ಮಿದೆ. ಭಾರತೀಯ ರಾಸಾಯನಿಕಗಳ ರಫ್ತು 2013-14 ಕ್ಕಿಂತ 2021-22 ರಲ್ಲಿ 106 ಶೇ. ಬೆಳವಣಿಗೆಯನ್ನು ದಾಖಲಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!