ಅಮೃತಯಾತ್ರೆ: ಬಂದರುಗಳಿಗೆ ಹೊಸರೂಪ, 35ಪಟ್ಟು ಹೆಚ್ಚಿದೆ ಭಾರತದ ಸರಕು ನಿರ್ವಹಣಾ ಸಾಮರ್ಥ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮೂರು ಕಡೆಗಳಿಂದ ಆವರಿಸಿಕೊಂಡಿರುವ ಕಡಲುಗಳು ಭಾರತದ ಪಾಲಿಗೆ ವರವಾಗಿ ಪರಿಣಮಿಸಿದೆ. ಕಡಲುಗಳ ಮೂಲಕವೇ ಭಾರತ ಜಗತ್ತಿನ ಇತರ ದೇಶಗಳೊಂದಿಗೆ ಅತಿ ಹೆಚ್ಚಿನ ವ್ಯಾಪಾರ ಮಾಡುತ್ತದೆ. ಭಾರತಕ್ಕೆ ಸಂಪತ್ತನ್ನು ತರುವ ಮಾರ್ಗಗಳಾಗಿವೆ ಈ ಕಡಲ ತೀರಗಳು. ಇನ್ನೂರು ವರ್ಷ ಭಾರತವನ್ನಾಳಿದ ಆಂಗ್ಲರು ಭಾರತಕ್ಕೆ ಬಂದಿದ್ದು ಕಡಲ ತೀರಗಳ ಮೂಲಕವೇ. ಕಡಲಯಾನದಲ್ಲಿ ಅದಾಗಲೇ ಭಾರತ ಜಗತ್ತಿನ ಇತರ ದೇಶಗಳನ್ನು ಮೀರಿಸಿತ್ತು ಎಂಬುದಕ್ಕೆ ಪುರಾವೆಗಳಿವೆ. ಹರಪ್ಪ ನಾಗರೀಕತೆಯ ಕಾಲದಲ್ಲಿಯೇ ಲೋಥಾಲ್‌ ನಂತಹ ಬಂದರುಗಳು ವ್ಯಾಪಾರದ ಕೇಂದ್ರಗಳಾಗಿದ್ದವು ಎಂಬುದದಕ್ಕೆ ಐತಿಹಾಸಿಕ ಪುರಾವೆಗಳಿವೆ. ಹೀಗೆ ಪ್ರಾಚೀನ ಕಾಲದಿಂದಲೂ ಕಡಲಯಾನ, ಹಡುಗಗಳ ನಿರ್ವಹಣೆ ವಿಷಯಗಳಲ್ಲಿ ಪರಿಣತಿ ಹೊಂದಿದ್ದ ದೇಶ ಸ್ವಾತಂತ್ರ್ಯದ ನಂತರವೂ ಕಡಲ ತೀರಗಳನ್ನು ವ್ಯಾಪಾರ ವಹಿವಾಟಿನ ಮುಖ್ಯ ಮಾರ್ಗವನ್ನಾಗಿ ಪರಿವರ್ತಿಸಿದೆ.

ಸ್ವಾತಂತ್ರ್ಯ ಬಂದ ನಂತರದಿಂದ ದೇಶದ ಬಂದರುಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಲಾಗಿದೆ. 1950-51ರ ಸಮಯದಲ್ಲಿ 19.38 ಮಿಲಿಯನ್‌ ಟನ್‌ ಗಳಷ್ಟು ಸರಕುಗಳನ್ನು ಭಾರತದ ಬಂದರುಗಳು ನಿರ್ವಹಿಸಿವೆ. ಬಂದರುಗಳನ್ನು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ಉನ್ನತ ದರ್ಜೆಗೇರಿಸಲು ಸಾಕಷ್ಟು ಕ್ರಮ ವಹಿಸಲಾಗಿದೆ. ಪರಿಣಾಮ ಈ ಸಾಮರ್ಥ್ಯದಲ್ಲಿ ಏರಿಕೆಯಾಗಿದ್ದು 2020-21ರಲ್ಲಿ 672.68 ಮಿಲಿಯನ್‌ ಟನ್‌ ಗಳಷ್ಟು ಸರಕುಗಳನ್ನು ನಿರ್ವಹಿಸಲಾಗಿದೆ. ಜಗತ್ತಿನಲ್ಲಿಯೇ ಅತ್ಯುತ್ತಮ ಗುಣಮಟ್ಟದ ಬಂದರುಗಳನ್ನು ಹೊಂದಿದೆ ಭಾರತ. ಸಾಗರಮಾಲಾ ದಂತಹ ಯೋಜನೆಗಳ ಮೂಲಕ ಭಾರತದ ಬಂದರುಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು ಈ ಬಂದರುಗಳಿಗೆ ಉತ್ತಮ ಸಾರಿಗೆ ಸಂಪರ್ಕವನ್ನು ಕಲ್ಪಿಸಲಾಗುತ್ತಿದೆ. 2030ರ ವೇಳೆಗೆ ವಿದ್ಯುದೀಕರಣದ ಮೂಲಕ ಎಲ್ಲಾ ಬಂದರುಗಳ ಸುಸ್ಥಿರ ಅಭಿವೃದ್ಧಿ ಸಾಧಿಸಲು ಯೋಜಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!