ಅಮೃತಯಾತ್ರೆ: ಎಣ್ಣೆಬೀಜಗಳ ಉತ್ಪಾದನೆಯಲ್ಲಿ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ದೇಶೀಯವಾಗಿ ಎಣ್ಣೆ ಬೀಜಗಳ ಉತ್ಪಾದನೆಯಲ್ಲಿ ಹೆಚ್ಚಳಸಾಧಿಸಿದ್ದೂ ಕೂಡ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಅಂಶಗಳಲ್ಲೊಂದು. ನಮ್ಮ ಜೀವನಕ್ಕೆ ಆಹಾರಧಾನ್ಯಗಳ ಜೊತೆಗೆ ಅಡುಗೆ ಎಣ್ಣೆ ಕೂಡ ಅತೀ ಅಗತ್ಯವಾದುದು. ಆದರೆ ಭಾರತ ತನ್ನ ಅಡುಗೆ ಎಣ್ಣೆಯ ಅಗತ್ಯತೆ ಪೂರೈಸಿಕೊಳ್ಳಲು ಇತರ ದೇಶಗಳ ಮೇಲೆ ಅವಲಂಬಿತವಾಗಿದೆ. ಇಂದಿಗೂ ಸಂಪೂರ್ಣವಾಗಿ ಭಾರತ ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿಲ್ಲ. ಆದರೆ ಆ ನಿಟ್ಟಿನಲ್ಲಿ ನಡೆಸಿರುವ ಪ್ರಯತ್ನಗಳಿಂದಾಗಿ ಎಣ್ಣೆ ಬೀಜಗಳ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ.

1950-51ರ ಸಮಯದಲ್ಲಿ ಒಟ್ಟಾರೆಯಾಗಿ ಭಾರತದಲ್ಲಿ 5.16 ಮಿಲಿಯನ್‌ ಟನ್‌ ಎಣ್ಣೆ ಬೀಜಗಳನ್ನು ಉತ್ಪಾದಿಸಲಾಗುತ್ತಿತ್ತು. ಇದು ದೇಶದ ಅಗತ್ಯತೆಗಳನ್ನು ಪೂರೈಸಲು ಸಾಲುತ್ತಿರಲಿಲ್ಲ. ಹಾಗಾಗಿ ಎಣ್ಣೆಬೀಜಗಳನ್ನು ಹೆಚ್ಚಾಗಿ ಬೆಳೆಯಲು ಪ್ರೋತ್ಸಾಹ ನೀಡಲಾಯಿತು. 1986-87ರ ಸಮಯದಲ್ಲಿ ʼಹಳದಿ ಕ್ರಾಂತಿʼಯ ಮೂಲಕ ಎಣ್ಣೆಬೀಜಗಳ ಉತ್ಪಾದನೆಯನ್ನು ಉತ್ತೇಜಿಸಲಾಯಿತು. ಅಲ್ಲೀಂದೀಚೆ ವರ್ಷದಿಂದ ವರ್ಷಕ್ಕೆ ಉತ್ಪಾದನೆ ಜಾಸ್ತಿಯಾಗುತ್ತಿದೆ. 2021-22ರ ಅವಧಿಯಲ್ಲಿ 37.70 ಲಕ್ಷ ಟನ್‌ ಎಣ್ಣೆ ಬೀಜಗಳನ್ನು ಉತ್ಪಾದಿಸಲಾಗಿದೆ. ಹೆಚ್ಚುಕಡಿಮೆ 6 ಪಟ್ಟು ಹೆಚ್ಚಳ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!