ಅಮೃತಯಾತ್ರೆ: ರಸ್ತೆ ಸುರಕ್ಷತೆಗೆ ಆದ್ಯತೆ- ಅಪಘಾತ ಪ್ರಮಾಣದಲ್ಲಿ ಕುಸಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೃತಯಾತ್ರೆಯ ಸಂದರ್ಭದಲ್ಲಿ ಭಾರತದಲ್ಲಿ ರಸ್ತೆ ಸುರಕ್ಷತೆಗೆಯಡೆಗೆ ಹೆಚ್ಚಿನ ಆದ್ಯತೆ ನೀಡಿ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವ್ಯಾಪಕ ಪ್ರಯತ್ನಗಳನ್ನು ಮಾಡಲಾಗಿದೆ. ಹೆದ್ದಾರಿಗಳ ನಿರ್ಮಾಣ, ಡಾಂಬರೀಕರಣ, ಜೊತೆಗೆ ಹಳೆಯ ರಸ್ತೆಗಳನ್ನು ಸರಿಪಡಿಸುವುದು, ರಸ್ತೆ ಸುರಕ್ಷತೆಯ ಕುರಿತು ಜಾಗ್ರಥಿ ಮೂಡಿಸುವುದು. ರಸ್ತೆ ಸುರಕ್ಷತಾ ಸಪ್ತಾಹದ ಆಚರಣೆ ಹೀಗೆ ಹಲವಾರು ಕಾರ್ಯಗಳನ್ನು ಮಾಡಲಾಗುತ್ತಿದೆ. ಇದಲ್ಲದೇ ಟ್ರಾಫಿಕ್‌ ನಿರ್ವಹಣೆಗಾಗಿಯೂ ಅನೇಕ ಕ್ರಮ ವಹಿಸಲಾಗಿದೆ. ರಸ್ತೆ ಸುರಕ್ಷತಾ ನಿಯಮ ಪಾಳನೆಯ ಕುರಿತು ಅಗತ್ಯ ಕ್ರಮ, ದಂಡ ವಿಧಿಸುವಿಕೆ ಹೀಗೆ ಹಲವಾರು ಕ್ರಮ ಕೈಗೊಳ್ಳಲಾಗಿದೆ.

ಟ್ರಾಫಿಕ್‌ ನಿಯಮಗಳ ಜಾರಿಗೆ ವಿಶೇಷ ಅಧಿಕಾರಿಗಳ ತಂಡವೂ ದೇಶದಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಪರಿಣಾಮ ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಅಪಘಾತಗಳ ಪ್ರಮಾಣ ಗಣನೀಯವಾಗಿ ತಗ್ಗಿದೆ. 1970ರ ಸಮಯದಲ್ಲಿ ಹತ್ತು ಸಾವಿರ ವಾಹನಗಳಲ್ಲಿ 814 ಅಪಘಾತಗಳಾಗುತ್ತಿದ್ದವು. ಆದರೆ ಈಗ ಈ ಪ್ರಮಾಣ ತಗ್ಗಿದೆ. 202ರ ಹೊತ್ತಿಗೆ ಹತ್ತು ಸಾವಿರ ವಾಹನಗಳಲ್ಲಿ 15 ಅಪಘಾತಗಳು ವರದಿಯಾಗಿವೆ. ರಸ್ತೆ ಅಪಘಾತದಲ್ಲಿ ಶೂನ್ಯದ ಗುರಿ ಸಾಧಿಸುವತ್ತ ಭಾರತದ ಮುಂದುವರೆಯುತ್ತಿದೆ. ಸಂಚಾರ ನಿಯಮಗಳ ಕಟ್ಟುನಿಟ್ಟಾದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಮೋಟಾರು ವಾಹನಗಳ (ತಿದ್ದುಪಡಿ) ಕಾಯಿದೆ, 2019 ಅನ್ನು ಅಂಗೀಕರಿಸಲಾಗಿದೆ. ಶಿಕ್ಷಣ, ಇಂಜಿನಿಯರಿಂಗ್, ನಿಯಮಗಳ ಜಾರಿ ಮತ್ತು ತುರ್ತು ಆರೈಕೆ ಹೀಗೆ ರಸ್ತೆ ಸುರಕ್ಷತೆಗೆ ಬಹು-ಮುಖಿ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!