ಅಮೃತಯಾತ್ರೆ: ಹತ್ತೇ ವರ್ಷದಲ್ಲಿ ಭಾರತದ ರಫ್ತನ್ನು 3 ಪಟ್ಟು ಹೆಚ್ಚಾಗಿಸಿದ ಕತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೃತಯಾತ್ರೆಯ ಸಂದರ್ಭದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಭಾರತದ ರಫ್ತುಗಳ ಪ್ರಮಾಣವೂ ಉಲ್ಲೇಖನೀಯ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿವರೆಗೆ ಸುಮಾರು 600 ಪಟ್ಟು ಹೆಚ್ಚಾಗಿದೆ ಭಾರತದಿಂದ ವಿದೇಶಗಳಿಗೆ ರಫ್ತಾಗುವ ಮೌಲ್ಯ.

1950ರಲ್ಲಿ ನಮ್ಮ ರಫ್ತಿನ ಒಟ್ಟಾರೆ ಮೌಲ್ಯ ಕೇವಲ 1.27 ಬಿಲಿಯನ್‌ ಡಾಲರುಗಳಷ್ಟಿತ್ತು. ಆದರೆ ಅಮೃತ ಮಹೋತ್ಸವವನ್ನು ಆಚರಿಸುತ್ತಿವ ಹೊತ್ತಿಗೆ ಇದು ಏರಿಕೆಯಾಗಿ 676.20 ಬಿಲಿಯನ್‌ ಡಾಲರಿಗೆ ತಲುಪಿದೆ. ಅದರಲ್ಲೂ 2011 ರಿಂದ 2021 ರ ನಡುವಿನ ವರ್ಷದಲ್ಲಿ ಭಾರತದ ರಫ್ತು ಹೆಚ್ಚು ಕಡಿಮೆ ಮೂರು ಪಟ್ಟು ಹೆಚ್ಚಾಗಿದೆ. 2010-11 ರ ವರ್ಷದಲ್ಲಿ ರಫ್ತಿನ ಮೌಲ್ಯವು 249.82 ಬಿಲಿಯನ್‌ ಡಾಲರುಗಳಷ್ಟಿತ್ತು. 2021-22ರ ಹೊತ್ತಿಗೆ ಇದು 676.20 ಬಿಲಿಯನ್‌ ಡಾಲರ್‌ ನಷ್ಟಾಗಿದೆ.

FY 2021-22 ರಲ್ಲಿ 419.65 ಬಿಲಿಯನ್ ಡಾಲರ್‌ ನಷ್ಟು ಅತ್ಯಧಿಕ ರಫ್ತು ಸಾಧಿಸಲಾಗಿದ್ದು ಹಿಂದಿನ ವರ್ಷಕ್ಕಿಂದ 43 ಶೇಕಡಾ ದಷ್ಟು ಬೆಳವಣಿಗೆ ಸಾಧಿಸಲಾಗಿದೆ. ಭಾರತದ ಕೃಷಿ ರಫ್ತಿನ ಪ್ರಮಾಣವೂ ಏರಿಕೆಯಾಗಿದ್ದು 50 ಬಿಲಿಯನ್‌ ಡಾಲರುಗಳ ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!