ಅಮೃತಯಾತ್ರೆ: ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಒತ್ತು ನೀಡಿದ್ದು ಹೀಗೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ್ಯದ 75 ವರ್ಷಗಳ ಅಮೃತ ಕಾಲದಲ್ಲಿ ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿರುವುದು ಗಮನಾರ್ಹ ಸಾಧನೆಗಳಲ್ಲೊಂದು. ಸ್ವಾತಂತ್ರ್ಯ ಬಂದಾಗಿನಿಂದ ಆಡಳಿತದಲ್ಲಿದ್ದ ಸರ್ಕಾರಗಳೆಲ್ಲವೂ ವೈದ್ಯಕೀಯ ಕ್ಷೇತ್ರವನ್ನು ಸುಧಾರಿಸಲು ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಇವುಗಳೆಲ್ಲವುಗಳ ಪರಿಣಾಮವಾಗಿ ಇಂದು ದೇಶವು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಕೊರೊನಾ ಸಾಂಕ್ರಾಮಿಕದಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ದೇಶೀಯವಾಗಿ ವ್ಯಾಕ್ಸಿನ್‌ ತಯಾರಿಸಿ ಜಗತ್ತಿನ ಹಲವು ದೇಶಗಳಿಗೂ ರವಾನಿಸಿ ಜಾಗತಿಕ ಸಂಜೀವಿನಿಯಾಗಿ ದೇಶ ಹೊರಹೊಮ್ಮಿದೆ.

ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಭಾರತ ಬೆಳೆದುಬಂದ ಹಾದಿಯನ್ನು ಗಮನಿಸುವುದಾದರೆ, 1951ರಲ್ಲಿ ಇಡೀ ದೇಶದಲ್ಲಿ ಕೇವಲ 28 ವೈದ್ಯಕೀಯ ಕಾಲೇಜುಗಳು ಮಾತ್ರವಿದ್ದವು. ಅವೂ ಕೂಡ ದೇಶದ ಕೆಲ ಪ್ರಮುಖ ಪ್ರದೇಶಗಳಲ್ಲಿದ್ದವು. ಅಲ್ಲಿಂದೀಚೆ ಅವುಗಳ ಸಂಖ್ಯೆಯಲ್ಲಿ 21 ಪಟ್ಟು ಹೆಚ್ಚಾಗಿದೆ. ಕಳೆದೊಂದು ದಶಕದಲ್ಲೇ ಅವುಗಳ ಸಂಖ್ಯೆ ದ್ವಿಗುಣಗೊಂಡಿದೆ. ಅಂದರೆ 2011ರ ಸಮಯದಲ್ಲಿ 334 ವೈದ್ಯಕೀಯ ಕಾಲೇಜುಗಳಿದ್ದರೆ 2022ಕ್ಕೆ ಅವುಗಳ ಸಂಖ್ಯೆ ದುಪ್ಪಟ್ಟಾಗಿ 612ಕ್ಕೆ ತಲುಪಿದೆ.

ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯ ಮೂಲಕ ಆಸ್ಪತ್ರೆಗಳು ಮತ್ತು ವೈದ್ಯಕೀಯ ಶಿಕ್ಷಣ ಸುಧಾರಿಸಿದೆ. ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲೆಂದೇ 2014ರಲ್ಲಿ ಕೇಂದ್ರದಿಂದ ಪ್ರಾಯೋಜಿತವಾದ ವಿಶೇಷ ಯೋಜನೆಯನ್ನೂ ಪ್ರಾರಂಭಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!