ಪ್ರತಿಜ್ಞೆ ಮಾಡಿದಂತೆ ಬ್ರಿಟಿಷ್‌ ಕಮಾಂಡರ್‌ ಬರ್ಕ್ಲಿಯನ್ನು ಕೊಂದು ತಲೆ ಕತ್ತರಿಸಿದ್ದರು ಮುರಾದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮುರಾದ್ ಫಾಟಿಯಾನಾ ಅವರು ಪಂಜಾಬ್‌ ನ ಮಾಂಟ್ಗೊಮೆರಿ ಜಿಲ್ಲೆಯ ಮಜು ಜಲ್ಲಿ ಗ್ರಾಮದ ಮುಖ್ಯಸ್ಥ ದಲೈಲ್ ಫಟಿಯಾನಾ ಅವರ ಮಗ.
ಅವರು 1857 ರ ಬ್ರಿಟಿಷ್ ಸರ್ಕಾರದ ವಿರುದ್ಧದ ದಂಗೆಯ ಒಂದು ಭಾಗವಾದ ಗೊಗಾರಿಯಾ ದಂಗೆಯ ಪ್ರಮುಖ ನಾಯಕರಾಗಿದ್ದರು. ದೆಹಲಿ ಮತ್ತು ಮೀರತ್ ದಂಗೆಯ ಸುದ್ದಿಯನ್ನು ಸ್ವೀಕರಿಸಿದ ನಂತರ ಖರ್ರಾಲ್ ಬುಡಕಟ್ಟಿನ ರಾಯ್ ಅಮ್ಹದ್ ಖರ್ರಾಲ್ ಬ್ರಿಟಿಷರ ವಿರುದ್ಧ ಬಹಿರಂಗವಾಗಿ ಬಂಡೆದ್ದಾಗ, ಮುರಾದ್ ತನ್ನ ಜನರೊಂದಿಗೆ ಅವರೊಂದಿಗೆ ಸೇರಿಕೊಂಡರು.
ಗಿಷ್ಕೋರಿಯ ಕಾಡಿನಲ್ಲಿ ಬ್ರಿಟೀಷ್‌ ಕಮಂಡರ್ ಬರ್ಕ್ಲಿಯಿಂದ ರಾಯ್ ಅಹ್ಮದ್ ಕೊಲ್ಲಲ್ಪಟ್ಟರು. ಈ ವೇಳೆ ಬರ್ಕ್ಲಿ ರಾಯ್ ಅಹ್ಮದ್ ಅವರ ತಲೆಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಟ್ಟರು. ಈ ವಿಚಾರ ತಿಳಿದ ಮುರಾದ್ ಅವರು ಬ್ರಿಟಿಷ್ ಸೈನ್ಯದ ಕಮಾಂಡರ್ ಅನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿದರು.
ಮರುದಿನ 22 ಸೆಪ್ಟೆಂಬರ್ 1857 ರಂದು ಫಾಟಿಯಾನಾ ಅವರು ಖರ್ರಾಲ್, ವಾಟೂ, ಮುರ್ಡಾನಾ, ವೆಹ್ನಿವಾಲ್ ಮತ್ತು ಭದ್ರೂ ಬುಡಕಟ್ಟುಗಳ ಸೈಜಿಕರ ಜೊತೆಗೂಡಿ ಬ್ರಿಟಿಷರ ಮೇಲೆ ದಾಳಿ ಮಾಡಿದರು. ದಾಳಿ ವೇಳೆ ಬರ್ಕ್ಲಿಯನ್ನು ಕೊಂದು ತಲೆಕತ್ತರಿಸಿದರು. ಜೊತೆಗೆ ರಾವಿ ನದಿಯ ದಡದಲ್ಲಿ ಐವತ್ತು ಬ್ರಿಟಿಷ್ ಸೈನಿಕರ ತಲೆಗಳನ್ನು ಕತ್ತರಿಸಿದರು. ಮತ್ತು ಅವರ ಮೃತ ದೇಹವನ್ನು ನದಿಗೆ ಎಸೆಯಲಾಯಿತು. ಬರ್ಕ್ಲಿ ಮತ್ತು ಅವರ ಸೇನಾ ಸಿಬ್ಬಂದಿಯ ಸಾವಿನ ಸುದ್ದಿಯನ್ನು ಕೇಳಿದ ನಂತರ, ಬ್ರಿಟಿಷರು ಫಾಟಿಯಾನಾ, ಮುರ್ಡಾನಾ, ಖರ್ರಾಲ್, ವಾಟೂ ಮತ್ತು ಜ್ಯೋಯಾ ಬುಡಕಟ್ಟುಗಳ ಹಳ್ಳಿಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. ಬ್ರಿಟಿಷರು ಬುಡಕಟ್ಟು ಜನಾಂಗದವರ ದಂಗೆಯನ್ನು ಹತ್ತಿಕ್ಕಿದರು ಮತ್ತು ಮುರಾದ್ ಮತ್ತು ಅವನ ಜನರನ್ನು ಬಂಧಿಸಿ ಅಂಡಮಾನ್ ದ್ವೀಪಗಳಿಗೆ ಕಳುಹಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!