ದಿನಭವಿಷ್ಯ| ಉನ್ನತಿ ಹೊಂದುವ ಉತ್ತಮ ಅವಕಾಶ ಕೈ ತಪ್ಪಬಹುದು, ಒಮ್ಮೆ ಯೋಚಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 
ಮೇಷ
ಉನ್ನತಿ ಹೊಂದುವ ಉತ್ತಮ ಅವಕಾಶ ಕೈತಪ್ಪಬಹುದು. ಹಾಗಾಗಿ ಯೋಚಿಸಿ ನಿರ್ಧಾರ ತಾಳಿ. ಬಳಿಕ ಪಶ್ಚಾತ್ತಾಪ ಆಗದಂತೆ ನೋಡಿಕೊಳ್ಳಿ. ಆರ್ಥಿಕ ಒತ್ತಡ ಅಧಿಕ.

ವೃಷಭ
ಸಕಾಲದಲ್ಲಿ ಕಾರ್ಯ ಮುಗಿಸಲು ಯತ್ನಿಸಿ. ಅದುವೇ ನಿಮ್ಮ ಯಶಸ್ಸಿಗೆ ದಾರಿ. ವಿಳಂಬಿತ ಕಾರ್ಯವು ನಿಮ್ಮ ವರ್ಚಸ್ಸು ಹಾಳು ಮಾಡಬಹುದು.

ಮಿಥುನ
ಆರ್ಥಿಕ ಕ್ಷೇತ್ರ ನಿಮಗಿಂದು ಪೂರಕವಾಗಿಲ್ಲ. ನಿರೀಕ್ಷಿತ ಧನಲಾಭ ಉಂಟಾಗದು. ಕೌಟುಂಬಿಕ ಒತ್ತಡಗಳು ಕಾಡುತ್ತವೆ.

ಕಟಕ
ಹಿಂದೆ ಎಸಗಿದ ಸತ್ಕಾರ್ಯದ ಫಲ ಸಿಗುವುದು. ವ್ಯವಹಾರದಲ್ಲಿ  ಯಾರನ್ನೂ ಕಡೆಗಣಿಸಬೇಡಿ. ಆರ್ಥಿಕ ಲಾಭ.

ಸಿಂಹ
ಕೆಲಸದಲ್ಲಿ ನಿರಾಸಕ್ತಿ. ಇತರರಿಂದ ಸೂಕ್ತ ಸಹಕಾರವೂ ಸಿಗದು. ಮನಸ್ಸಲ್ಲಿ ಅತೃಪ್ತಿ. ಇದರಿಂದಾಗಿ ಎಲ್ಲರ ಮುಂದೆ ರೇಗುವಿರಿ. ಸಾಂಸಾರಿಕ ಬಿಕ್ಕಟ್ಟು.

ಕನ್ಯಾ
ಪ್ರೇಮದ ವಿಚಾರದಲ್ಲಿ ಏರುಪೇರು. ಸಂತೋಷ, ಬೇಸರ ಎರಡನ್ನೂ ಇಂದು ಅನುಭವಿಸುವಿರಿ. ಸಮತ್ತದಿಂದ ವ್ಯವಹರಿಸಿರಿ.

ತುಲಾ
ಕಠಿಣ ಕಾರ್ಯ. ಅದರೊಂದಿಗೆ ಸವಾಲೂ ಹೆಚ್ಚು. ಸಂಗಾತಿ ಜತೆಗೆ ಭಿನ್ನಮತ ಸಂಭವ. ಮಾತಿಗೆ ಮಾತು ಬೆಳೆಸದಿರಿ, ತಾಳ್ಮೆ ಮುಖ್ಯ ಎಂದರಿಯಿರಿ.

ವೃಶ್ಚಿಕ
ಕಾರ್ಯದಲ್ಲಿ ಉತ್ಸಾಹ. ದಿನವಿಡೀ ಉಲ್ಲಾಸದ ಮನಸ್ಥಿತಿ. ನೀವು ಬಯಸಿದ ಬೆಳವಣಿಗೆ ಸಾಧ್ಯವಾಗುವುದು. ಆಪ್ತರು ನಿಮ್ಮ ಇಷ್ಟಗಳಿಗೆ ಸ್ಪಂದಿಸುತ್ತಾರೆ.

ಧನು
ಹೆಚ್ಚಿನ ಜವಾಬ್ದಾರಿ, ಒತ್ತಡಗಳಿಲ್ಲದ ದಿನ. ಮಾನಸಿಕ ನಿರಾಳತೆ. ಕುಟುಂಬದ ಸದಸ್ಯರ ಉನ್ನತಿಯು ಮನಸ್ಸಿಗೆ ಸಂತೋಷ ತರಲಿದೆ. ಕೌಟುಂಬಿಕ ಶಾಂತಿ.

ಮಕರ
ಆಸ್ತಿ ಅಥವಾ ವಾಹನ ಖರೀದಿಗೆ ದಿನ ಪೂರಕವಾಗಿದೆ. ಆರ್ಥಿಕ ಅಡಚಣೆ ಉಂಟಾಗದು. ಕುಟುಂಬ ಸದಸ್ಯರ ಮಧ್ಯೆ ಉತ್ತಮ ಹೊಂದಾಣಿಕೆ.

ಕುಂಭ
ನಿಮ್ಮ ಆಪ್ತೇಷ್ಟರ ಸಫಲತೆಯು ನಿಮ್ಮ ಮುಖದಲ್ಲಿ ನಗು ಮೂಡಿಸಲಿದೆ. ಅವರ ಸಂತೋಷದಲ್ಲಿ ನೀವೂ ತೃಪ್ತಿ ಕಾಣುವಿರಿ. ಆರ್ಥಿಕ ಸ್ಥಿತಿ ಉತ್ತಮ.

ಮೀನ
ಆರ್ಥಿಕ ಪರಿಸ್ಥಿತಿ ನಿಭಾಯಿಸುವುದು ಸವಾಲೆನಿಸಬಹುದು. ಆದಾಯ- ಖರ್ಚಿನ ಮಧ್ಯೆ ಸಮತೋಲನ ಇರಲಿ. ಕಣ್ಣಿನ ಬಾಧೆ ಉಂಟಾದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!