ಮಕ್ಕಳ ಕೈಗೆ ಮೊಬೈಲ್‌, ಚಾರ್ಜರ್‌ ಕೊಡೋಕು ಮುನ್ನ ಎಚ್ಚರ: ಕಾರವಾರದಲ್ಲಿ ನಡೆದೇ ಹೋಯ್ತು ಘೋರ ದುರಂತ

ಹೊಸದಿಗಂತ ವರದಿ ಕಾರವಾರ: 

ಮಕ್ಕಳ ಕೈಗೆ ಮೊಬೈಲ್‌, ಚಾರ್ಜರ್‌, ಎಲೆಕ್ಟ್ರಾನಿಕ್‌ ಉಪಕರಣಗಳು ಸಿಗುವುದು ಒಳ್ಳೆಯದಲ್ಲ ಎಂದು ಗೊತ್ತಿದ್ದರೂ ಕೆಲವೊಮ್ಮೆ ಅಚಾತುರ್ಯ ಘಟನೆಗಳು ನಡೆದೇ ಹೋಗುತ್ತವೆ. ಅದಕ್ಕೆ ಮತ್ತೊಂದು ಉದಾಹರಣೆಯಾಗಿ ಎಂಟು ತಿಂಗಳ ಮಗುವಿನ ಸಾವು ಕಣ್ಮುಂದಿದೆ.

ಮೊಬೈಲ್ ಪೋನ್ ಚಾರ್ಜರ್ ಬಾಯಲ್ಲಿ ಹಾಕಿದ 8 ತಿಂಗಳ ಮಗು ವಿದ್ಯುತ್ ಶಾಕ್ ಹರಿದು ಮೃತ ಪಟ್ಟ ಘಟನೆ ತಾಲೂಕಿನ ಸಿದ್ದರ ಗ್ರಾಮದಲ್ಲಿ ನಡೆದಿದೆ.

ಸಿದ್ದರ ನಿವಾಸಿ ಸಂತೋಷ ಕಲ್ಗುಟಕರ್ ಅವರ ಹೆಣ್ಣು ಮಗು ಸಾನಿದ್ಯ ಮೃತ ಪಟ್ಟಿದೆ. ಮಗುವಿಗೆ ಈಗಿನ್ನು 8 ತಿಂಗಳು.

ಚಾರ್ಜ್‌ ಆದ ಪೋನ್ ತೆಗೆದ ಬಳಿಕ ಚಾರ್ಜರ್‌ ವೈರ್ ತೆಗೆಯುವುದನ್ನು ಮರೆತಿದ್ದೇ ದುರಂತಕ್ಕೆ ಕಾರಣ. ವಿದ್ಯುತ್ ಸ್ವಿಚ್‌ ಬೋರ್ಡಿಗೆ ಅಳವಡಿಸಿದ್ದ ಚಾರ್ಜರ್‌ ಕೇಬಲ್‌ ಅನ್ನು ಮಗು ಆಟವಾಡುತ್ತಾ ಹೋಗಿ ಬಾಯಲ್ಲಿ ಹಾಕಿಕೊಂಡಿದೆ. ಕೂಡಲೇ ವಿದ್ಯುತ್‌ ಪ್ರವಹಿಸಿ ಕಂದಮ್ಮ ಸ್ಥಳದಲ್ಲೇ ಅಸುನೀಗಿದೆ.

ಘಟನೆ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಬೈಲ್ ಪೋನ್ ಚಾರ್ಜ್ ಮಾಡಿದ ನಂತರ ವಿದ್ಯುತ್ ಸ್ವಿಚ್ ಆಫ್ ಮಾಡದೇ ಹಾಗೆ ಬಿಡುವ ಎಲ್ಲರಿಗೂ ಈ ಘಟನೆ ಎಚ್ಚರಿಕೆಯ ಘಂಟೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!