‘ತುನಿವು’ ರಿಲೀಸ್ ವೇಳೆ ಅಜಿತ್ ಕುಮಾರ್ ಅಭಿಮಾನಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಜಿತ್ ಕುಮಾರ್ ನಟನೆಯ ತುನಿವು ಇಂದು ರಿಲೀಸ್ ಆಗಿದ್ದು, ಸಿನಿಮಾ ರಿಲೀಸ್ ವೇಳೆ ಸಂಭವಿಸಿದ ಅಪಘಾತದಲ್ಲಿ ಅಭಿಮಾನಿಯೊಬ್ಬ ಮೃತಪಟ್ಟಿದ್ದಾನೆ.

ಚೆನ್ನೈನಲ್ಲಿ ಸಿನಿಮಾಕ್ಕೆ ಭರ್ಜರಿ ಸ್ವಾಗತ ಸಿಕ್ಕಿದೆ. ಬೆಳಗ್ಗೆ 5ಗಂಟೆಯಿಂದಲೇ ಶೋಗಳು ಪ್ರದರ್ಶನ ಕಂಡಿವೆ. ಮುಂಜಾನೆ 1 ಗಂಟೆಗೂ ಶೋ ಒಂದನ್ನು ಆಯೋಜಿಸಲಾಗಿತ್ತು. ಸೆಲೆಬ್ರೇಷನ್‌ಗಾಗಿ ಟ್ರಕ್ ಒಂದನ್ನು ಕರೆಸಲಾಗಿತ್ತು. ಟ್ರಕ್ ಏರಿದ್ದ ಭರತ್ ಕುಮಾರ್ ನಿಧಾನವಾಗಿ ಚಲಿಸುವ ವೇಳೆ ಕೆಳಗೆ ಹಾರಿದ್ದಾರೆ.

ಸಣ್ಣ ಪುಟ್ ಗಾಯಗಳಾದಂತೆ ಕಂಡುಬಂದಿದೆ ಆದರೆ ಭರತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಕ್ಕಾಪಟ್ಟೆ ಎಕ್ಸೈಟ್‌ಮೆಂಟ್‌ನಲ್ಲಿ ಭರತ್ ಇದ್ದರು. ಟ್ರಕ್‌ನಿಂದ ಹಾರಿ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!