ಮೂರನೇ ಏಕದಿನ ಪಂದ್ಯಕ್ಕೂ ವರುಣನ ಆಗಮನ: ನ್ಯೂಜಿಲೆಂಡ್‌ ಗೆ ಒಲಿದ ಸರಣಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯವೂ ಕೂಡ ಮಳೆಯಿಂದಾಗಿ ರದ್ದಾಗಿದೆ. ಈ ಮೂಲಕ ಟೀಮ್ ಇಂಡಿಯಾ ಏಕದಿನ ಸರಣಿಯನ್ನು 0-1 ರಿಂದ ಸೋಲು ಕಂಡಿದೆ.

ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ 7 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.ನಂತರ ಹ್ಯಾಮಿಲ್ಟನ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಇದೀಗ ಮಳೆಯ ಕಾರಣಕ್ಕೆ ಮೂರನೇ ಏಕದಿನ ಪಂದ್ಯದಲ್ಲೂ ವರುಣದೇವನೇ ಟೀಮ್ ಇಂಡಿಯಾಕ್ಕೆ ವಿಲನ್‌ ಆಗಿದ್ದಾನೆ.

ಇಂದು ಭಾರತ ನೀಡಿದ್ದ 220 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 18 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 104 ರನ್ ಗಳಿಸಿದ್ದರು. ಅಷ್ಟರಲ್ಲಿ ಭಾರೀ ಮಳೆ ಸುರಿಯಲಾರಂಭಿಸಿದ್ದರಿಂದ ಪಂದ್ಯ ಮುಂದುವರಿಸಲು ಸಾಧ್ಯವಾಗಲಿಲ್ಲ. ಭಾರತ ಏಕದಿನ ಸರಣಿಯನ್ನು 0-1 ಅಂತರದಿಂದ ಕಳೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!