ಅಬ್ಬಾ ಎಂತಾ ಅದೃಷ್ಟ..! ಒಬ್ಬ ವ್ಯಕ್ತಿಗೆ ಒಂದೇ ದಿನ ಹೊಡೀತು ಮೂರು ಲಾಟರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭೂಮಿಯ ಮೇಲೆ ಕೆಲವರು ಎಂತಹ ಅದೃಷ್ಟಶಾಲಿಗಳಾಗಿರುತ್ತಾರೆಂದರೆ, ಅವರೇನೇ ಮಾಡಿದರೂ ಅದೃಷ್ಟ ಕಾಲುಮುರಿದುಕೊಂಡು ಅವರೆದುರು ಬಿದ್ದಿರುತ್ತದೆ. ಅಮೇರಿಕಾದ ಮೇರಿಲ್ಯಾಂಡ್‌ನ ಅದೃಷ್ಟಶಾಲಿಯೊಬ್ಬನಿಗೂ ಹಾಗೆಯೇ ಆಗಿದೆ. ಅವನ ಅದೃಷ್ಟದ ಬಲದಿಂದ ಅಪಾರ ಐಶ್ವರ್ಯ ಒಲಿದು ಬಂದಿದೆ.
ಟೌಸನ್‌ ನಗರದ 67 ವರ್ಷ ವಯಸ್ಸಿನ ವ್ಯಕ್ತಿ ಪ್ರಮಾದವಶಾತ್ ಒಂದೇ ಮಾದರಿಯ‌ ಮೂರು ಲಾಟರಿ ಟಿಕೆಟ್‌ಗಳನ್ನು ತಪ್ಪಾಗಿ ಖರೀದಿಸಿದ್ದರು. ಆದರೆ ಎಲ್ಲರೂ ಅಚ್ಚರಿಪಡುವಂತೆ ಆತ ಅವೆಲ್ಲವುಗಳಲ್ಲೂ ಜಾಕ್‌ ಪಾಟ್‌ ಗೆದ್ದಿದ್ದಾನೆ.
ಹೆಸರು ಹೇಳಿಕೊಳ್ಳಲು ಇಚ್ಛಿಸದ ವ್ಯಕ್ತಿಯು, ಕಳೆದ ವಾರ ಒಂದೇ ಡ್ರಾಗೆ ಸೇರಿದ್ದ ಮೂರು ಟಿಕೆಟ್‌ ಗಳನ್ನು ಖರೀದಿಸಿದ್ದಾನೆ. ವ್ಯಕ್ತಿಯು ಮಧ್ಯಾಹ್ನ ಲಾಟರಿ ಸಂಸ್ಥೆಗೆ ಹೋಗಿ ಲಾಟರಿ ಟಿಕೆಟ್‌ ಒಂದನ್ನು ಖರೀದಿಸಿದ್ದ ಆದರೆ ಸಂಜೆ ವೇಳೆಗೆ ಅದನ್ನು ಮರೆತು ಪಿಕ್ 5 ಲಾಟರಿ ಸೆಂಟರ್ ಗೆ ಹೋಗಿ ಮತ್ತೊಂದು ಟಿಕೆಟ್ ಖರೀದಿಸಿದ್ದಾನೆ.
ಏತನ್ಮಧ್ಯೆ, ತನ್ನ ಪತಿ ಲಾಟರಿ ಟಿಕೆಟ್‌ ಖರೀದಿಸಲು ಮರೆತಿರಬಹುದು ಎಂದು ಭಾವಿಸಿದ ಆತನ ಪತ್ನಿ, ಅದೇ ದಿನ ಮೂರನೇ ಟಿಕೆಟ್ ಖರೀದಿಸಿದ್ದಾಳೆ. ಮನೆಯಲ್ಲಿ ನೋಡುವಾಗ ಒಂದೇ ಡ್ರಾದ ಮೂರು ಟಿಕೆಟ್‌ಗಳನ್ನು ಹೊಂದಿರುವುದನ್ನು ಕಂಡ ದಂಪತಿಗಳು ಹಣವನ್ನು ವ್ಯರ್ಥ ವಾಗಿರುವ ಬಗ್ಗೆ ಕಿತ್ತಾಡಿಕೊಂಡಿದ್ದಾರೆ. ಆದರೆ ತಮ್ಮ ಮೂರ್ಖತನದ ತಪ್ಪು ಜಾಕ್‌ಪಾಟ್ ಹೊಡೆಸುತ್ತದೆ ಎಂದು ಅವರು ಕಲ್ಪನೆಯನ್ನೂ ಮಾಡಿರಲಿಲ್ಲ. ಆದರೆ ಲಾಟರಿ ಫಲಿತಾಂಶ ಪ್ರಕಟವಾದಾಗ ದಂಪತಿಗೆ ತಮ್ಮ ಕಣ್ಣನ್ನು ತಮಗೆ ನಂಬಲು ಸಾಧ್ಯವಾಗಿಲ್ಲ. ಅವರು ಖರೀದಿಸಿದ ಮೂರು ಟಿಕೆಟ್‌ ಗೆ ಲಾಟರಿ ಹೊಡೆದಿದ್ದು 150,000 ಡಾಲರ್ (ರೂ. 1,22,82,030) ಹಣವನ್ನು ಬಾಚಿಕೊಂಡಿದ್ದಾರೆ.
ಆದರೆ ಈ ಅನಾಮಧೇಯ ವ್ಯಕ್ತಿಗೆ ಅದೃಷ್ಟದ ಬಲದಿಂದ ಜಾಕ್‌ ಪಾಟ್‌ ಹೊಡೆಯುತ್ತಿರುವುದು ಇದೇ ಮೊದಲೇನಲ್ಲ. ಒಂದೆರಡು ವರ್ಷಗಳ ಹಿಂದೆ ಸಹ ಫೋರ್-ಬಾಲ್ ಆಟದಲ್ಲಿ ಭಾರೀ ಬಹುಮಾನವನ್ನು ಗೆದ್ದಿದ್ದ. ಅಚ್ಚರಿಯ ವಿಚಾರವೆಂದರೆ ಹಿಂದಿನ ಗೆಲುವು ಕೂಡ ಆತನ ತಪ್ಪಿನಿಂದಲೇ ಒಲಿದುಬಂದಿತ್ತು.
ಡ್ರಾ ಸಮಯದಲ್ಲಿ, ಆತ ತನ್ನ ಮಗಳ ಜನ್ಮ ವರ್ಷ ಅಂದರೆ 1979 ರ ಸಂಖ್ಯೆಯನ್ನು ಆಡಲು ಬಯಸಿದ್ದರು, ಆದರೆ ಅದನ್ನು ಅಂಗಡಿಯ ಕ್ಲರ್ಕ್ ತಪ್ಪಾಗಿ ಕೇಳಿಸಿಕೊಂಡು ಅವರಿಗೆ 1997 ಸಂಖ್ಯೆ ಟಿಕೆಟ್ ನೀಡಿದ್ದ. ಆ ನಂತರ ಮನೆಗೆ ಬಂದು ಪರಿಶೀಲಿಸಿದಾಗ ಆ ಬಾರಿ ಜಾಕ್‌ ಪಾಟ್‌ ಹೊಡೆದ ನಂಬರ್ 1997‌ ಆಗಿತ್ತು!”

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!