September 15, 2026
Tuesday, September 15, 2026
spot_img

ಒಂದು EMI ಕಥೆ | ಸ್ಯಾಲರಿ ಕ್ರೆಡಿಟ್ ಆಯ್ತು, ಇಎಂಐ ಡೆಬಿಟ್ ಆಯ್ತು.. ಕೈಯಲ್ಲಿ ಉಳಿದಿದ್ದು ಮಾತ್ರ ‘0’!

ಪ್ರತಿ ತಿಂಗಳ ಮೊದಲ ಐದು ದಿನಗಳು ಅಂದ್ರೆ ಸಾಕು, ಸಾಮಾನ್ಯ ಜನರಲ್ಲಿ ಒಂದು ರೀತಿಯ ಆತಂಕ ಶುರುವಾಗುತ್ತದೆ. ಕೈಗೆ ಸಂಬಳ ಬರುತ್ತೆ ಅನ್ನೋ ಖುಷಿಗಿಂತ ಹೆಚ್ಚಾಗಿ, ಬ್ಯಾಂಕ್‌ನಿಂದ ಬರೋ ಆ ಒಂದು ‘ಡೆಬಿಟ್’ ಮೆಸೇಜ್ ಎಲ್ಲಿ ನೆಮ್ಮದಿ ಕೆಡಿಸುತ್ತೋ ಅನ್ನೋ ಭಯವೇ ಹೆಚ್ಚು.

ತಿಂಗಳ ಆರಂಭದ ಈ ಐದು ದಿನಗಳನ್ನು “EMI ವಾರ” ಎಂದೇ ಕರೆಯಬಹುದು. ಮನೆ ಬಾಡಿಗೆ, ಕಾರಿನ ಕಂತು, ಪರ್ಸನಲ್ ಲೋನ್ ಹೀಗೆ ಸಾಲು ಸಾಲು ಜವಾಬ್ದಾರಿಗಳು ಒಂದೇ ಸಮನೆ ದಾಳಿ ಇಡುತ್ತವೆ.

ಮೊಬೈಲ್‌ನಲ್ಲಿ ಬರುವ ಪ್ರತಿ ನೋಟಿಫಿಕೇಶನ್ ಕೂಡ ಯಾವುದೋ ಬಿಲ್ ಪಾವತಿಯದ್ದೇ ಆಗಿರುತ್ತದೆ. ಈ ಐದು ದಿನಗಳನ್ನು ಸಲೀಸಾಗಿ ದಾಟಿಬಿಟ್ಟರೆ, ಉಳಿದ 25 ದಿನ ಹೇಗೋ ಮ್ಯಾನೇಜ್ ಮಾಡಬಹುದು ಎಂಬುದು ಪ್ರತಿಯೊಬ್ಬ ಮಧ್ಯಮ ವರ್ಗದ ವ್ಯಕ್ತಿಯ ಮಂತ್ರವಾಗಿದೆ.

ಬಜೆಟ್ ಹೊಂದಿಸುವುದು ಒಂದು ಕಡೆಯಾದರೆ, ಅಕೌಂಟ್‌ನಲ್ಲಿ ಹಣ ಉಳಿಸಿಕೊಳ್ಳುವುದು ಇನ್ನೊಂದು ದೊಡ್ಡ ಸವಾಲು. ಒಟ್ಟಿನಲ್ಲಿ, ಸಾಮಾನ್ಯನ ಪಾಲಿಗೆ ಕ್ಯಾಲೆಂಡರ್‌ನ ಮೊದಲ ಐದು ದಿನಗಳು ಬರೀ ದಿನಾಂಕಗಳಲ್ಲ, ಅವು ಇಎಂಐ ಎಂಬ ತಲೆನೋವಿನ ಮಾತ್ರೆಗಳಿದ್ದಂತೆ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !