ಟ್ವೀಟರ್‌ ನಲ್ಲಿ ಕೇಂದ್ರಸಚಿವ ನಿತಿನ್‌ ಗಡ್ಕರಿಗೆ ಆನಂದ ಮಹೀಂದ್ರಾ ಮನವಿ: ಟ್ವೀಟ್ ನಲ್ಲೇನಿದೆ ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಟ್ವೀಟರ್‌ ನಲ್ಲಿ ಸದಾ ಸಕ್ರಿಯವಾಗಿರುವ ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್‌ ಮಹೀಂದ್ರಾ ಅವರು ಕೇಂದ್ರಸಚಿವ ನಿತಿನ್‌ ಗಡ್ಕರಿಯವರಿಗೆ ಟ್ವೀಟ್‌ವೊಂದರ ಮೂಲಕ ಮನವಿ ಮಾಡಿದ್ದಾರೆ. ವಿಡಿಯೋವೊಂದನ್ನು ಹಂಚಿಕೊಂಡಿರುವ ಆನಂದ್‌ ಮಹೀಂದ್ರಾ ಅವರು ರಸ್ತೆಗಳ ಪಕ್ಕದಲ್ಲಿ ಮರಗಳನ್ನು ನೆಡುವಂತೆ ಸಾರಿಗೆ ಸಚಿವರಲ್ಲಿ ಮನವಿ ಮಾಡಿದ್ದಾರೆ.

ಸದಾ ವೈರಲ್‌ ವೀಡಿಯೋಗಳನ್ನು ಹಂಚಿಕೊಳ್ಳುವ ಆನಂದ್‌ ಮಹೀಂದ್ರಾ ಈ ಬಾರಿ ಹಂಚಿಕೊಂಡ ವೀಡಿಯೋದಲ್ಲಿ ಎರಡೂ ಪಕ್ಕಗಳಲ್ಲಿ ಮರಗಳಿರುವ ಸುಂದರವಾದ ರಸ್ತೆಯೊಂದರ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಬೆಳೆದು ನಿಂತಿರುವ ಮರಗಳು ಗುಹೆಯೊಂದರಲ್ಲಿ ಸಾಗಿದಂತೆ ಅನುಭವ ಕೊಡುವ ವೀಡಿಯೋ ಇದಾಗಿದ್ದು ಭಾರತದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಗ್ರಾಮೀಣ ರಸ್ತೆಗಳಲ್ಲಿ ಮರಗಳನ್ನು ನೆಡುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ.

ಇದೀಗ ವೈರಲ್ ಆಗಿರುವ ವಿಡಿಯೋವನ್ನು ಆನಂದ್ ಮಹೀಂದ್ರಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ದೂರದಿಂದ ರಸ್ತೆಯು ನಿಜವಾದ ಸುರಂಗದಂತೆ ಕಾಣುತ್ತದೆ. ಮಹೀಂದ್ರಾ ಅದಕ್ಕೆ ಒಂದು ಹೆಸರನ್ನು ಸಹ ನೀಡಿದ್ದು ಮತ್ತು ಅದನ್ನು “ಟ್ರನಲ್” ಎಂದು ಕರೆದಿದ್ದಾರೆ. ಇದು ಮರಗಳು ಮತ್ತು ಸುರಂಗ ಪದಗಳೆರಡನ್ನೂ ಸೂಚಿಸುತ್ತದೆ.

“ನಾನು ಸುರಂಗಗಳನ್ನು ಇಷ್ಟಪಡುತ್ತೇನೆ, ಆದರೆ ನಾನೂ ಈ ರೀತಿಯ ‘ಟ್ರನಲ್’ ಮೂಲಕ ಹೋಗಬಯಸುತ್ತೇನೆ…ಗಡ್ಕರಿಜೀ, ನೀವು ನಿರ್ಮಿಸುತ್ತಿರುವ ಹೊಸ ಗ್ರಾಮೀಣ ರಸ್ತೆಗಳಲ್ಲಿ ಈ ಕೆಲವು ಸುರಂಗಗಳನ್ನು ಉದ್ದೇಶಪೂರ್ವಕವಾಗಿ ನೆಡಲು ನಾವು ಯೋಜಿಸಬಹುದೇ?” ಎಂದು ಆನಂದ್‌ ಮಹೀಂದ್ರಾ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!