Wednesday, September 27, 2023

Latest Posts

‘ಕಲವಂತಿನ್ ದುರ್ಗ’ ಚಾರಣ ಎಷ್ಟು ಭಯಾನಕ ಗೊತ್ತಾ? ಆನಂದ್ ಮಹೀಂದ್ರಾ ಶೇರ್ ಮಾಡಿರುವ ವಿಡಿಯೋ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಸದಾ ಆಸಕ್ತಿದಾಯಕ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾ..ಜನರಿಗೆ ಒಂದಷ್ಟು ಮಾಹಿತಿ ಒದಗಿಸುವ ಮೂಲಕ ಎಲ್ಲ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ಮಹಾರಾಷ್ಟ್ರದ ‘ಕಲವಂತಿನ್ ದುರ್ಗ’ದಲ್ಲಿ ಪ್ರವಾಸಿಗರು ಟ್ರಕ್ಕಿಂಗ್ ಮಾಡುವ ಆಸಕ್ತಿದಾಯಕ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ತನಗೆ ಈ ತಾಣ ಗೊತ್ತಿಲ್ಲ, 60 ಡಿಗ್ರಿ ಬೆಂಡ್ ಇರುವ ಈ ಬೆಟ್ಟಗಳಲ್ಲಿ ಚಾರಣ ಮಾಡಬಹುದೇ? ಎಂಬ ಅನುಮಾನ ವ್ಯಕ್ತಪಡಿಸಿದರು.

ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಆನಂದ್ ಮಹೀಂದ್ರಾ ಅವರ ವೀಡಿಯೊ ನೆಟ್ಟಿಗರ ಮನಗೆದ್ದಿದೆ. ಅಷ್ಟೇ ಅಲ್ಲ ಕೊಂಚ ಭಯವೂ ಉಂಟು ಮಾಡಿದೆ. ಕಲವಂತಿನ್ ದುರ್ಗವನ್ನು ಏರುವುದು ಪಶ್ಚಿಮ ಘಟ್ಟಗಳಲ್ಲಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇದು ಸುಮಾರು 60 ಡಿಗ್ರಿ ಇಳಿಜಾರಿನಲ್ಲಿದೆ. ಹೀಗೆಂದು ವಿಡಿಯೋ ನೋಡಿದ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

‘ವೀಡಿಯೊದಲ್ಲಿನ ಇಳಿಜಾರು ತುಂಬಾ ಕಡಿದಾದದ್ದಾಗಿದೆ.. ಅಲ್ಲಿ ತೇವ ಮತ್ತು ಜಾರು ಪರಿಸ್ಥಿತಿಗಳ ಕಾರಣ ಜನರು ಸರಿಯಾದ ಬೂಟುಗಳನ್ನು ಧರಿಸಬೇಕು’ ಅಲ್ಲಿಂದ ಬಿದ್ದರೆ ಮೂಳೆಯೂ ಸಿಗುವುದಿಲ್ಲ ಎಂಬ ಕಮೆಂಟ್‌ಗಳ ಬರುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!