Thursday, September 21, 2023

Latest Posts

ಹುಟ್ಟುಹಬ್ಬದ ದಿನವೇ ಸಾವನ್ನಪ್ಪಿದ ಅಭಿಮಾನಿಗಳು: ಕುಟುಂಬಸ್ಥರ ನೋವಿಗೆ ಜೊತೆಯಾದ ನಟ ಸೂರ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಲಿವುಡ್ ಸ್ಟಾರ್ ಹೀರೋ ಸೂರ್ಯಗೆ ದೇಶಾದ್ಯಂತ ಅಪಾರ ಅಭಿಮಾನಗಿಳಿದ್ದಾರೆ. ತಮ್ಮ ನೆಚ್ಚನ ನಟನ ಸಿನಿಮಾಗಳನ್ನು ಅನಂದಿಸುವುದಲ್ಲದೆ, ಬರ್ತಡೇ ಬಂದರಂತೂ ಅವರ ಸಂತೋಷ ಹೇಳತೀರದು. ಈ ಸಂಭ್ರಮಾಚರಣೆ ವೇಳೆ ವಿಷಾದ ಮನೆ ಮಾಡಿತ್ತು. ತನ್ನ ಹುಟ್ಟುಹಬ್ಬದಂದು ಇಬ್ಬರು ಅಭಿಮಾನಿಗಳು ಸಾವನ್ನಪ್ಪಿದ್ದು, ಕುಟುಂಬಸ್ಥರ ನೋವಿಗೆ ಜೊತೆಯಾಗಿ, ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು.

ಇವರಿಬ್ಬರ ಸಾವು ಕುಟುಂಬದಲ್ಲಿ ದುಃಖವನ್ನು ತುಂಬಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸಂತ್ರಸ್ತರ ಕುಟುಂಬಗಳಿಗೆ ಕರೆ ಮಾಡಿ ದುರಂತಕ್ಕೆ ಬೇಸರ ವ್ಯಕ್ತಪಡಿಸಿದರು. ವಿಡಿಯೋ ಕಾಲ್ ಮೂಲಕ ಅಭಿಮಾನಿಗಳ ಕುಟುಂಬಸ್ಥರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ನಿಮ್ಮ  ಜೊತೆ ತಾನು ಇರುತ್ತೇನೆ ಎಂಬ ಭರವಸೆ ನೀಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಿವೆ.

ಮೋಪುವಾರಿಪಾಲೆಂನಲ್ಲಿ ಸೂರ್ಯ ಹುಟ್ಟುಹಬ್ಬದ ಬ್ಯಾನರ್‌ಗಳನ್ನು ಕಟ್ಟುವ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಪದವಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಮತ್ತೊಬ್ಬ ಅಭಿಮಾನಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!